ಭಾರತೀಯ ಕಲೆ, ಸಂಗೀತ ಎಲ್ಲೆಡೆ ಪಸರಿಸಲಿ

trayi
Published on

ಹುಬ್ಬಳ್ಳಿ: ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಭಾರತೀಯ ಕಲೆ, ಸಂಗೀತ ಜಗತ್ತಿನೆಲ್ಲೆಡೆ ಪಸರಿಸುವ ಕಾರ್ಯವಾಗಬೇಕು ಎಂದು ಹುಬ್ಬಳ್ಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ರಘುವೀರಾನಂದ ಮಹಾರಾಜರು ಹೇಳಿದರು.

ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ತ್ರಯಿ ಕಲಾ ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂಗೀತ ಶ್ರಾವಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತ್ರಯಿ ಕಲಾ ಸಂಸ್ಥೆಯು ಉನ್ನತ ಉದ್ದೇಶ ಇಟ್ಟುಕೊಂಡು ಸ್ಥಾಪಿತವಾದ ಸಂಸ್ಥೆಯಾಗಿದ್ದು ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದ ಯುವ ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಿ ಪೋ›ತ್ಸಾಹ ನೀಡುತ್ತಿರುವುದು ಸ್ತುತ್ಯಾರ್ಹ ಎಂದರು.

ಬಾಲ ವಿಕಾಸ ಅಕಾಡೆಮಿ ಜಂಟಿ ನಿರ್ದೇಶಕಿ ಭಾರತಿ ಶೆಟ್ಟರ್ ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗೋಪಾಲ ಜೋಶಿ, ಮಾಲತಿ ಜೋಶಿ, ಸಂಚಾಲಕಿ ಅಕ್ಷತಾ ಜೋಶಿ, ಅಜಯ ಜೋಶಿ, ವಿನಾಯಕ ಜೋಶಿ, ಡಾ ನಾಗಲಿಂಗ ಮುರಗಿ ಉಪಸ್ಥಿತರಿದ್ದರು.

ಡಾ. ಗುರುಬಸವ ಮಹಾಮನೆ, ಸಾತ್ವಿಕ ಮಹಾಮನೆ ವಾಯೋಲಿನ್ ವಾದನ, ಹೇಮಂತ ಜೋಶಿ ತಬಲಾ ಸೋಲೋ ಪ್ರಸ್ತುತಪಡಿಸಿದರು. ಪಂ. ಕೃಷ್ಣೆಂದ್ರ ವಾಡೇಕರ ಗಾಯನ, ಶಿವಾನಿ ಕವಠೇಕರ, ಬಸವರಾಜ ವಂದಲಿ, ಡಾ. ವಿಜಯಕುಮಾರ ಪಾಟೀಲ, ಹಿರಿಯ ಗಾಯಕ ಉಸ್ತಾದ ಫಯಾಜ್ ಖಾನ್ ಮತ್ತು ಶಿಷ್ಯ ಸರ್ಫರಾಜಖಾನ್, ಉಸ್ತಾದ ಶಫೀಕ ಖಾನ್ ಹಾಗೂ ಸಮೀರ ರಾವ್ ಪ್ರದರ್ಶನ ನೀಡಿದರು. ಪಂಡಿತ ಬಾಲಚಂದ್ರ ನಾಕೋಡ ಗಾಯನ ಪ್ರಸ್ತುತಪಡಿಸಿದರು. ಪಂ. ರಾಜೇಂದ್ರ ನಾಕೋಡ, ಕೇಶವ ಜೋಶಿ, ಶ್ರೀಹರಿ ದಿಗ್ಗಾವಿ ತಬಲಾ ಸಾಥ್ ನೀಡಿದರೆ, ಚಿದಂಬರ ಜೋಶಿ, ಯಶವಂತ ಥಿಟೆ, ಮೇಘನಾ ಅಥಣಿಕರ, ಗುರುಪ್ರಸಾದ ಹೆಗಡೆ ಹಾರ್ವೇನಿಯಂ ಸಾಥ್ ನೀಡಿದರು. ವಿಜಯೇಂದ್ರ ಅಥಣಿಕರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net