

ಗಂಗಾವತಿ: ನಗರದ ಹೊಸಳ್ಳಿ ರಸ್ತೆಯ ಶ್ರೀ ಗುರುಮೌನೇಶ್ವರ ದೇವಾಲಯದಲ್ಲಿ ವಿಶ್ವಕರ್ಮ ಸಮಾಜದ ತಾಲೂಕು ಘಟಕದ ಕಾರ್ಯಕಾರಿ ಮಂಡಳಿ ರಚನೆ ಸಭೆ ಮತ್ತು ವಿಶೇಷ ಪೂಜೆ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಗುರುಮೌನೇಶ್ವರ ಮೂರ್ತಿಗೆ ಅಭಿಷೇಕ, ಅಲಂಕಾರ, ಪಲ್ಲಕ್ಕಿ ಸೇವೆ ಜರುಗಿದವು. ಸಂಘಟನೆ ಸಭೆ ನಂತರ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷ ನಾಗೇಶಕುಮಾರ ಕಂಸಾಲ ಮಾತನಾಡಿ, ವಿಶ್ವಕರ್ಮ ಸಮಾಜ ಎಲ್ಲ ಕ್ಷೇತ್ರದಲ್ಲೂ ಹಿಂದುಳಿದಿದ್ದು, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬಲಿಷ್ಠವಾಗಬೇಕಿದೆ. ಸಮಾಜದ ಸಾಧಕರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಪದಾಧಿಕಾರಿಗಳ ಆಯ್ಕೆ: ತಾಲೂಕು ಘಟಕಕ್ಕೆ ಜಿ.ಮಂಜುನಾಥ ಸರ್ಾ(ಗೌರವಾಧ್ಯಕ್ಷ), ಕಾಳೇಶ ಬಡಿಗೇರ(ಅಧ್ಯಕ್ಷ), ಮನೋಹರ ವಿಶ್ವಕರ್ಮ, ಗುರುನಾಥ ಬಡಿಗೇರ(ಉಪಾಧ್ಯಕ್ಷ), ಚಿದಂಬರ ದಿಕ್ಷೀತ್ (ಕಾರ್ಯದರ್ಶಿ), ಕೃಷ್ಣಮೂರ್ತಿ ಪತ್ತಾರ(ಸಹ ಕಾರ್ಯದರ್ಶಿ), ದೇವೇಂದ್ರಪ್ಪ ಬಡಿಗೇರ (ಖಜಾಂಚಿ), ಗುರಪ್ಪ ಬಡಿಗೇರ, ಬಸವರಾಜ ಬಡಿಗೇರ, ಸಣ್ಣೆಪ್ಪ ಕಮ್ಮಾರ, ವೀರೇಶ ಮಾಚಳ್ಳಿ, ಪ್ರಶಾಂತ ಸುತಾರ, ಪ್ರಶಾಂತ ಸೋನಾರ, ರುದ್ರೇಶ ಬಡಿಗೇರ, ಮಲ್ಲಿಕಾರ್ಜುನಾಚಾರ (ನಿರ್ದೇಶಕರು) ಆಯ್ಕೆ ಮಾಡಲಾಯಿತು. ಪ್ರಮುಖರಾದ ಸಿ.ವಿ ಸರ್ವಜ್ಞ ಆಚಾರ, ಶಂಕ್ರಪ್ಪ ಮನವಾಚಾರ ಸೇರಿ ಮಹಿಳಾ ಮತ್ತು ಯುವಕ ಮಂಡಳಿ ಸದಸ್ಯರಿದ್ದರು.