ನಾಡಿದ್ದು ಚಿಕ್ಕೋಡಿ ಕ್ಷೇತ್ರ ಕೇಸರಿಮಯವಾಗಲಿ

1
ಯಡೂರ ವೀರಭದ್ರ ದೇವಸ್ಥಾನದಲ್ಲಿ ಶುಕ್ರವಾರ ಸ್ವಚ್ಛತಾ ಅಭಿಯಾನ ಜರುಗಿತು. ಅಣ್ಣಾಸಾಹೇಬ ಜೊಲ್ಲೆ, ಅಜಯ ಸೂರ್ಯವಂಶಿ, ಅಮರ್ ಬೋರಗಾವೆ ಇತರರಿದ್ದರು.
Published on

ಮಾಂಜರಿ: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಪ್ರತಿ ದೇವಸ್ಥಾನದಲ್ಲಿ ಜ.22ರ ವರೆಗೆ ಸ್ವಚ್ಛತಾ ಕಾರ್ಯ ಜರುಗಲಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಸಮೀಪದ ಯಡೂರ ಗ್ರಾಮದ ವೀರಭದ್ರ ದೇವಸ್ಥಾನದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ದಿನದಂದು ಕ್ಷೇತ್ರ ಕೇಸರಿಮಯವಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಅಜಯ ಸೂರ್ಯವಂಶಿ, ಅಮರ್ ಬೋರಗಾವೆ, ರಾಹುಲ್ ದೇಸಾಯಿ, ಮನೋಹರ್ ಮೋಹಿತೆ, ಪ್ರಶಾಂತ ಉಮರಾನೆ, ಸಂತೋಷ ಜೋಶಿ, ದಿಲೀಪ್ ಪವಾರ, ಮನೋಜ್ ಕಿಚಡಿ, ಧೋಂಡಿರಾಮ ಬೆಡಗೆ, ಮಹಾವೀರ ಮಂಗಸುಳೆ, ಸಂಜಯ ಗಾಯಕವಾಡ, ಮುಕುಂದ ಜಾದವ್, ಪ್ರಭಾಕರ ಪುಟಾಣಿ, ರಮೇಶ ಮನೆ, ರಾಜಾರಾಮ ಮನೆ, ಪ್ರಕಾಶ ಮಿರ್ಜಿ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net