ಭಾವೈಕ್ಯ ಬೆಸೆಯುವ ಹಬ್ಬ ಆಗಲಿ

CLK ED MILAD 28
Published on

ಚಳ್ಳಕೆರೆ: ಸಮಾನತೆ ಮತ್ತು ಧರ್ಮ ಪಾಲನೆಯ ಸಂದೇಶ ಸಾರಿರುವ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ನಗರದ ಗಾಂಧಿನಗರ ಮಸೀದಿಯಿಂದ ಆರಂಭಗೊಂಡ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಪ್ರವಾದಿ ಅವರ ಜನ್ಮದಿನಾಚರಣೆ ಅಂಗವಾಗಿ ಆಚರಿಸುತ್ತಿರುವ ಈದ್ ಮಿಲಾದ್ ಹಬ್ಬ ಸಮಾಜದಲ್ಲಿನ ವಿವಿಧ ಸಮುದಾಯಗಳ ಮಧ್ಯೆ ಭಾವೈಕ್ಯ ಬೆಸೆಯುವ ಹಬ್ಬವಾಗಬೇಕು ಎಂದು ಹೇಳಿದರು.

ನಗರದಲ್ಲಿನ ವಿವಿಧ ಮಸೀದಿಗಳ ಮುತ್ತುವಲ್ಲಿಗಳು ಸೇರಿ ನೂರರು ಸಂಖ್ಯೆಯಲ್ಲಿ ಮುಸ್ಲಿಮರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಪುರಸಭಾ ಮಾಜಿ ಅಧ್ಯಕ್ಷ ಸಿ.ಆರ್.ಅಲ್ಲಾಭಕ್ಷ್, ಅತಿಕುರ್ ರೆಹಮಾನ್, ಎಸ್.ಎಚ್. ಸೈಯದ್, ಎಸ್.ಟಿ. ಜುಬೇರ್, ಎಸ್‌ಎಂಬಿ ಖಾದ್ರಿ, ಎಸ್. ಮುಜೀಬುಲ್ಲಾ, ಬಷೀರ್ ಹಯಾತ್, ಮಹಮ್ಮದ್ ಖಲೀಮ್ ವುಲ್ಲಾ, ಬಿ. ಫರೀದ್ ಖಾನ್, ಕರವೇ ಯುವ ಘಟಕ ಅಧ್ಯಕ್ಷ ಎಸ್‌ಎಂಬಿ ನಬೀ, ಖಮ್ರುಜ್, ವಾಸಿಮ್, ಮೆಹಬೂಬ್, ರಿಯಾಜ್, ದಾನಿಶ್ ಖಲಂದರ್, ಶೋಯಬ್, ನಯಾಜ್, ಪೈಜಾನ್, ಅಫ್ರಿಧಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net