ಮಕ್ಕಳಲ್ಲಿ ಸಂಸ್ಕಾರ, ದೇಶಭಕ್ತಿ ತುಂಬುವ ಕೆಲಸವಾಗಲಿ

BALAMELA
Published on

ಕುಮಟಾ: ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ದೇಶಭಕ್ತಿ ತುಂಬುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಪಾಲಕರು ಹೆಚ್ಚಿನ ಕಾಳಜಿ ವಹಿಸಿ ಅವರನು ಉತ್ತಮ ನಾಗರಿಕರನ್ನಾಗಿಸಬೇಕು ಎಂದು ಪೊ›.ಎಂ.ಜಿ. ಭಟ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ತಾಲೂಕಿನ ಸಂತೇಗುಳಿಯ ಪ್ರೌಢಶಾಲೆಯ ಸಭಾಭವನದಲ್ಲಿ ಸಂತೇಗುಳಿ, ಸೊಪ್ಪಿನಹೊಸಳ್ಳಿ, ಮೂರೂರು ಹಾಗೂ ಕಲ್ಲಬ್ಬೆ ಪಂಚಾಯಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಬಾಲಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಸೊಪ್ಪಿನಹೊಸಳ್ಳಿ ಪಂಚಾಯಿತಿ ಅಧ್ಯಕ್ಷೆ ಶೈಲಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾದ ಸಂತೇಗುಳಿ ಪಂಚಾಯಿತಿ ಮಾಜಿ ಅಧ್ಯಕ್ಷ ವಿನಾಯಕ ಭಟ್, ಜನಪರ ಹೊರಾಟ ವೇದಿಕೆ ಉಪಾಧ್ಯಕ್ಷ ಉದಯ ಭಟ್, ವಿವಿಧ ಪಂಚಾಯಿತಿ ಸದಸ್ಯರಾದ ಜಮಾಲ್ ಸಾಬ್, ಮಾದೇವಿ ಮುಕ್ರಿ, ಭಾರತೀ ಮುಕ್ರಿ, ಮೇಲ್ವಿಚಾರಕರಾದ ಇಂದಿರಾ ಹರಿಕಾಂತ, ಭಾರತಿ ಪಟಗಾರ ಇತರರಿದ್ದರು.

ಬಂಗಣೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಅವರೊಂದಿಗೆ ಅಂಗನವಾಡಿ ಮಕ್ಕಳಾದ ವಿನುತಾ, ಚಿರನ್ವಿ, ಭೂಮಿಕಾ, ಕಾಂಚನ, ಧನ್ಯಶ್ರೀ ಪ್ರಾರ್ಥಸಿದರು. ಇಂದಿರಾ ಹರಿಕಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮಾವತಿ ನಾಯ್ಕ, ಮೂರೂರು ಅಂಗನವಾಡಿ ಕಾರ್ಯಕರ್ತೆ ಗುಲಾಬಿ ಕೋಡಿಯಾ ಹಾಗೂ ಸೀಮಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಸಂತೆಗುಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ ನಾಯ್ಕ ಮಕ್ಕಳಿಗೆ ಬಹುಮಾನ ನೀಡಿದರು. ರವಿ ನಾಯ್ಕ, ಅಸ್ಲಂ ಸಾಬ್, ಯಜತ್ ಸಾಬ್, ಗುರುಪ್ರಸಾದ ನಾಯ್ಕ, ಪರಮೇಶ್ವರ ನಾಯ್ಕ, ವಿಶ್ವನಾಥ ನಾಯ್ಕ, ಅಂಗನವಾಡಿ ಕಾರ್ಯಕರ್ತೆಯರಾದ ವಿಮಲಾ ನಾಯ್ಕ, ಸುಗುಣಾ ಮಡಿವಾಳ, ಸುಧಾ ಹೆಗಡೆ, ಕಲ್ಪನಾ ಶೆಟ್ಟಿ, ಸರೋಜ ನಾಯ್ಕ, ಶೈಲಾ ಶೆಟ್ಟಿ, ರತ್ನಾ ನಾಯ್ಕ, ಶಾಂತಿ ಗೌಡ, ಸಾವಿತ್ರಿ ಗೌಡ, ರೇವತಿ ನಾಯ್ಕ, ಕಲಾವತಿ ಮರಾಠಿ, ತಾರಾ ನಾಯ್ಕ, ಸವಿತಾ ನಾಯ್ಕ, ಪ್ರೇಮ ನಾಯ್ಕ, ಲೀಲಾವತಿ ನಾಯ್ಕ, ಕುಸುಮಾ ನಾಯ್ಕ, ದಾಕ್ಷಾಯಿಣಿ ನಾಯ್ಕ, ಸುಮನಾ ನಾಯ್ಕ, ಸುಮನಾ ಭಂಡಾರಿ, ಮಾದೇವಿ ಗೌಡ, ಹೇಮಾ ಗೌಡ, ಉಷಾ ನಾಯ್ಕ, ಸಾವಿತ್ರಿ ಗೌಡ, ಗೀತಾ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net