ಮಕ್ಕಳಿಗೆ ಕ್ರೀಡಾಸ್ಫೂರ್ತಿ ಮೂಡಿಸುವ ಕೆಲಸವಾಗಲಿ

06-kkr5(8-24 sports
ಕಿಕ್ಕೇರಿಯ ಕೆಪಿಎಸ್ ಶಾಲಾ ಮೈದಾನದಲ್ಲಿ ಮಂಗಳವಾರ ಹೋಬಳಿಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟ ನಡೆಯಿತು. ರೇವತಿ, ಐಕನಹಳ್ಳಿ ಕೃಷ್ಣೇಗೌಡ, ಚಲುವನಾರಾಯಣಸ್ವಾಮಿ, ಸಿ.ಕೆ. ಶಿವರಾಮೇಗೌಡ, ಪದ್ಮೇಶ್, ಪೂರ್ಣಚಂದ್ರ ತೇಜಸ್ವಿ, ಜ್ಯೋತಿ ಮತ್ತಿತರರಿದ್ದರು.
Published on

ಕಿಕ್ಕೇರಿ : ಮಕ್ಕಳಲ್ಲಿ ಕ್ರೀಡಾಸ್ಫೂರ್ತಿ ಮೂಡಿಸುವ ಕೆಲಸವಾದಲ್ಲಿ ಮಕ್ಕಳ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದು ಇನ್‌ಸ್ಪೆಕ್ಟರ್ ರೇವತಿ ತಿಳಿಸಿದರು.
ಇಲ್ಲಿನ ಕೆಪಿಎಸ್ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಎರಡು ದಿನಗಳ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಾಧಕರಿಗೆ ಬೇಕಿರುವುದು ಸ್ಪರ್ಧೆ ಭಾಗವಹಿಸುವುದು. ಸೋಲು, ಗೆಲುವಿನ ಲೆಕ್ಕಾಚಾರ ಬೇಡ ಎಂದರು.
ಆಗದು ಎಂದು ಕುಳಿತರೆ ಸಾಧನೆ ಶೂನ್ಯ. ಬೆಳೆಯುವ ಭವಿಷ್ಯದ ಮಕ್ಕಳಿಗೆ ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ. ಆತ್ಮಸ್ಥೈರ್ಯ ತುಂಬುವ ಕೆಲಸ ಪಾಲಕ-ಶಿಕ್ಷಕರಿಂದ ಆಗಬೇಕಿದೆ. ಕ್ರೀಡಾಪಟುಗಳ ಸಾಧನೆ ತಿಳಿಸಿಕೊಡಿ ಎಂದರು.
ಕ್ರೀಡಾ ಧ್ಜಜಾರೋಹಣ, ಕ್ರೀಡಾಜ್ಯೋತಿ ಸ್ವೀಕಾರ, ಪಥಸಂಚಲನ, ಕ್ರೀಡಾಪಟುಗಳ ಪರಿಚಯ ನಡೆಯಿತು. ಹೋಬಳಿಯ ವಿವಿಧ ಗ್ರಾಮಗಳ 34 ಶಾಲೆಗಳ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭುಕುಮಾರ್, ಕೆಪಿಎಸ್‌ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಇಸಿಒ ವೀರಭದ್ರಯ್ಯ, ಸಿಆರ್‌ಪಿ ರಾಮಚಂದ್ರು, ವಿವಿಧ ಸರ್ಕಾರಿ ನೌಕರ ಸಂಘ ಪದಾಧಿಕಾರಿಗಳಾದ ಸಿ.ಕೆ.ಶಿವರಾಮೇಗೌಡ, ಪದ್ಮೇಶ್, ಎಸ್.ಎಂ. ಬಸವರಾಜು, ಯೋಗೇಶ್, ರಮೇಶ್, ಆನಂದ್, ಲಕ್ಷಣಗೌಡ, ಪಿ.ಜೆ. ಕುಮಾರ್, ಕೆ.ಎಸ್. ಮಂಜುನಾಥ್, ಪಾರ್ವತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net