ಚಿಂತಕರ ಕೊಡುಗೆ ಸ್ಮರಿಸುವ ಕಾರ್ಯವಾಗಲಿ

ಅರಸೀಕೆರೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಎನ್.ಆರ್.ಸಂತೋಷ್ ಮಾಲಾರ್ಪಣೆ ಮಾಡಿದರು. ಎ.ಬಿ.ಗುರುಸಿದ್ದೇಶ್, ಭಾಸ್ಕರ್,ಅಜಯ್, ಮೇಲುಗಿರಿಗೌಡ, ಶಿವನ್‌ರಾಜ್  ಹರ್ಷವರ್ಧನ್, ಉಮೇಶ್, ಲೋಕೇಶ್ ಇದ್ದರು.
ಅರಸೀಕೆರೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಎನ್.ಆರ್.ಸಂತೋಷ್ ಮಾಲಾರ್ಪಣೆ ಮಾಡಿದರು. ಎ.ಬಿ.ಗುರುಸಿದ್ದೇಶ್, ಭಾಸ್ಕರ್,ಅಜಯ್, ಮೇಲುಗಿರಿಗೌಡ, ಶಿವನ್‌ರಾಜ್ ಹರ್ಷವರ್ಧನ್, ಉಮೇಶ್, ಲೋಕೇಶ್ ಇದ್ದರು.
Published on

ಅರಸೀಕೆರೆ: ದೇಶದ ಅಸ್ಮಿತೆಯನ್ನು ಎತ್ತಿ ಹಿಡಿದ ಮಹಾನ್ ಚೇತನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಬಣ್ಣಿಸಿದರು.

ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಸೋಮವಾರ ಮಾಲಾರ್ಪಣೆ ಮಾಡಿ ಮಾತನಾಡಿ, ಜೀವನದುದ್ದಕ್ಕೂ ಸಂಕಷ್ಟದ ಸರಮಾಲೆ ಎದುರಿಸಿ ಜನರಿಗೆ ಕಾನೂನು ಹಾಗೂ ಸಿದ್ಧಾಂತಗಳನ್ನು ಪರಿಚಯಿಸಿಕೊಡುವ ಮೂಲಕ ಅನುಭವ ಮಂಟಪದ ನೈಜ ಕನಸನ್ನು ನನಸು ಮಾಡಿದ್ದಾರೆ ಎಂದರು.

ಪ್ರಸಕ್ತ ಸನ್ನಿವೇಶದಲ್ಲಿ ಸಂವಿಧಾನದ ಮಹತ್ವವನ್ನು ಯುವ ಸಮುದಾಯಕ್ಕೆ ತಿಳಿಸುವ ಅಗತ್ಯವಿದೆ. ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಿ ರಜೆ ಪಡೆದು ಮನೆಗೆ ತೆರಳಿದರೆ ಸಾಲದು. ಬದಲಾಗಿ ದಿನವಿಡೀ ಭಿನ್ನ, ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಚಿಂತಕರ ಕೊಡುಗೆಗಳನ್ನು ಸ್ಮರಿಸುವ ಕಾರ್ಯ ತುರ್ತಾಗಿ ನಡೆಯಬೇಕಿದೆ ಎಂದು ಪ್ರತಿಪಾದಿಸಿದರು.

ದುಮ್ಮೇನಹಳ್ಳಿ ಗ್ರಾಪಂ ಅಧ್ಯಕ್ಷ ಅಜಯ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಎ.ಬಿ.ಗುರುಸಿದ್ದೇಶ್, ಭಾರತ ವೀ ನಗರಸಭೆ ಸದಸ್ಯರಾದ ಭಾಸ್ಕರ್, ಮೇಲುಗಿರಿಗೌಡ, ನಗರ ಪ್ರಾಧಿಕಾರದ ಮಾಜಿ ಸದಸ್ಯ ಶಿವನ್‌ರಾಜ್, ಮುಖಂಡರಾದ ಹರ್ಷವರ್ಧನ್, ಉಮೇಶ್, ರಂಗನಾಥ್, ನಿವೃತ್ತ ಉಪನ್ಯಾಸಕ ರಮೇಶ್, ಕುಮಾರ್, ಮಾರುತಿ, ಲೋಕೇಶ್ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net