

ಇಳಕಲ್ಲ: ಶಿಕ್ಷಣ ಸಂಸ್ಥೆಗಳಲ್ಲಿ ಜ್ಞಾನ ಮತ್ತು ಸಂಸ್ಕೃತಿ ಕಲಿಸುವ ಕಾರ್ಯ ನಡೆಯಬೇಕೆಂದು ಜಮಖಂಡಿಯ ಸಾಹಿತಿ, ಉಪನ್ಯಾಸಕ ಯಶವಂತ ಕೊಕ್ಕಣ್ಣನವರ ಹೇಳಿದರು.
ಇಲ್ಲಿನ ಸ್ಪಂದನ ವಿದ್ಯಾವರ್ಧಕ ಸಂಘದ ಸ್ಪಂದನ ವಿಜ್ಞಾನ ಪಪೂ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾತಿಗೆ ಯಾರ ಹಂಗೂ ಇರಬಾರದು. ಉತ್ತಮವಾಗಿ ಬೆಳೆದು ಜೀವನದಲ್ಲಿ ಸಾಧನೆ ಮಾಡಬೇಕು. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ ಕೌದಿ, ಉಪಾಧ್ಯಕ್ಷ ಲಕ್ಷ್ಮಣ ಅರಸಿದ್ಧಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಅಮರೇಶ ಕೌದಿ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಅನಿಲ ಬೆನ್ನೂರ ಪ್ರಾರ್ಥಿಸಿದರು. ಲಕ್ಷ್ಮಣ ಹಾದಿಮನಿ ಸ್ವಾಗತಿಸಿದರು. ವಿರೇಶ ಬಾಚನಹಳ್ಳಿ, ಬಸವರಾಜ ತುಂಬಗಿ ಇತರರಿದ್ದರು.
ರವಿ ಅರಸಿದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ನಾಲತವಾಡ ನಿರೂಪಿಸಿದರು. ಜ್ಯೋತಿ ವಂದಿಸಿದರು. ವಿದ್ಯಾರ್ಥಿ ಕಾರ್ಯದರ್ಶಿ ಅನುಜಾ ವರ್ಕಲ್ ಉಪಸ್ಥಿತರಿದ್ದರು.