ಸಾಧಕರನ್ನು ಗುರುತಿಸುವ ಕಾರ್ಯವಾಗಲಿ

Prof. Shambhu Bhat Felisitated
Published on

ಸಿದ್ದಾಪುರ: ಸಾಧಕರನ್ನು ಗುರುತಿಸಿ ಗೌರವಿಸದಿದ್ದರೆ ಸಾಧನೆಯ ಮಾರ್ಗವನ್ನು ಅನುಸರಿಸುವವರ ಸಂಖ್ಯೆ ವಿರಳವಾಗುತ್ತದೆ. ಆದ್ದರಿಂದ ಸಮಾಜದಲ್ಲಿರುವ ಸಾಧಕರನ್ನು ಗುರುತಿಸುವ ಕಾರ್ಯ ನಮ್ಮಿಂದಾಗಬೇಕು ಎಂದು ಪತ್ರಕರ್ತ ರಾಘವೇಂದ್ರ ಹೆಗಡೆ ಬೆಟ್ಟಕೊಪ್ಪ ಹೇಳಿದರು.

ತಾಲೂಕಿನ ಭುವನಗಿರಿಯ ಭುವನೇಶ್ವರಿದೇವಾಲಯದಲ್ಲಿ ಸುಷಿರ ಸಂಗೀತ ಪರಿವಾರದವರು ದೇವಾಲಯದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಆಯೋಜಿಸಿದ್ದ ಭಜಭುವನೇಶ್ವರಿ ಭಜನಾಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿರಿಯ ಕೊಳಲು ವಾದಕರು ಮತ್ತು ವಿದ್ವಾಂಸರಾದ ಶಂಭು ಭಟ್ಟ ಕಡತೋಕಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಪದೋನ್ನತಿ ಹೊಂದಿ ವರ್ಗಾಣೆಗೊಂಡಿರುವ ಸಿದ್ದಾಪುರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ತಿಮ್ಮಯ್ಯ ಜಿ. ಅವರನ್ನು ದೇವಾಲಯದ ವತಿಯಿಂದ ಗೌರವಿಸಲಾಯಿತು. ಪ್ರಕಾಶ ಹೆಗಡೆ ಕಲ್ಲಾರೆಮನೆ, ನಾರಾಯಣ ಹೆಗಡೆ ಕಲ್ಲಾರೆಮನೆ ಉಪಸ್ಥಿತರಿದ್ದರು.

ವಿ.ದತ್ತಮೂರ್ತಿ ಭಟ್ಟ ಅಭಿನಂದನಾ ನುಡಿಗಳನ್ನಾಡಿದರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಅಧ್ಯಕ್ಷತೆವಹಿಸಿ ಮಾತನಾಡಿದರು. ಪ್ರಶಾಂತ ಹೆಗಡೆ ಕಾಶಿಗದ್ದೆ, ಜಯಪ್ರಕಾಶ ಭಟ್ಟ ಮುತ್ತಿಗೆ , ಶ್ರೀಕಾಂತ ಭಟ್ಟ ಮುತ್ತಿಗೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net