ಮಕ್ಕಳಲ್ಲಿ ಧೈರ್ಯ ತುಂಬುವ ಕಾರ್ಯವಾಗಲಿ

Ylp sanmana
Published on

ಯಲ್ಲಾಪುರ: ಮಕ್ಕಳಲ್ಲಿ ಧೈರ್ಯವನ್ನು ತುಂಬುವ ಕಾರ್ಯವನ್ನು ಪಾಲಕರು ಮಾಡಬೇಕು. ಧೈರ್ಯವಿದ್ದರೆ ಮಾತ್ರ ಸಾಧನೆಯತ್ತ ಮುನ್ನುಗ್ಗುವ ಹುಮ್ಮಸ್ಸು ನಮ್ಮದಾಗುತ್ತದೆ ಎಂದು ಜೀವ ವಿಮಾ ಸಲಹೆಗಾರ ಶಂಕರ ನಾಗರಕಟ್ಟೆ ಹೇಳಿದರು.

ಅವರು ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಸ್ಥಾನದ ಸಭಾಭವನದಲ್ಲಿ ತಾಲುಕು ಕನ್ನಡ ವೈಶ್ಯ ಸಮಾಜದ ’ಮಾಘ ಶುದ್ಧ ಪ್ರತಿಪದೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳು ತಂದೆ ತಾಯಿಯರನ್ನು ದೂಷಿಸಬಾರದು. ಅವರ ಮಾತನ್ನು ಗೌರವಿಸಬೇಕು. ವೃದ್ಧಾಪ್ಯದಲ್ಲಿ ಮಕ್ಕಳಂತೆ ಅವರನ್ನು ಪಾಲಿಸಬೇಕು ಎಂದರು.

ತಾಲೂಕು ಕನ್ನಡ ವೈಶ್ಯ ಸಮಾಜ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಭಗವದ್ಗೀತಾ ಪಠಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಸಂಜೀವಕುಮಾರ ಹೊಸ್ಕೇರಿ ಹಾಗೂ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು.

ಉಪನ್ಯಾಸಕಿ ಪೂರ್ಣಿಮಾ ನಾಗರಕಟ್ಟೆ, ವರ್ತಕ ವೆಂಕಟೇಶ ಶೆಟ್ಟಿ ಅಂಕೋಲಾ, ಸುಷ್ಮಾ ಶೆಟ್ಟಿ, ತಾಲೂಕು ಕನ್ನಡ ವೈಶ್ಯ ಸಮಾಜ ಸಂಘದ ಉಪಾಧ್ಯಕ್ಷ ಡಾ.ಗುರುರಾಜ ಶೆಟ್ಟಿ ಇತರರಿದ್ದರು. ಸಂಘದ ಕಾರ್ಯದರ್ಶಿ ಸತೀಶ ಶೆಟ್ಟಿ, ಸುಲೋಚನಾ ಶೆಟ್ಟಿ ನಿರ್ವಹಿಸಿದರು. ದಿನೇಶ ದೇವರಾಜ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net