ಮಕ್ಕಳಿಗೆ ಆದರ್ಶ ತಿಳಿಸುವ ಕಾರ್ಯವಾಗಲಿ

Let it be a role model for children.
ಬಸವನಬಾಗೇವಾಡಿ ಪಟ್ಟಣದ ಬಸವ ಭವನದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪಿ. ಎಸ್. ಮಳಗಿ, ಪುರಸಭೆ ಅಧ್ಯಕ್ಷೆ ಜಗೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ, ಮುಖಂಡರಾದ ಅಶೋಕ ಚಲವಾದಿ, ಗುರು ಗುಡಿಮನಿ, ಪುರಸಭೆ ಅಧ್ಯಕ್ಷೆ ಜಗೇವಿ ಗುಂಡಳ್ಳಿ ಇತರರಿದ್ದರು.
Published on

ಬಸವನಬಾಗೇವಾಡಿ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ಒಂದು ವರ್ಗಕ್ಕೆ ಸೀಮಿತವಾದ ನಾಯಕರಲ್ಲ, ದೇಶವೇ ಮಾನ್ಯ ಮಾಡುವ ರಾಷ್ಟ ನಾಯಕ ಎಂದು ಧಾರವಾಡ ಎಲ್‌ಐಸಿಯ ಡೆಪ್ಯುಟಿ ಮ್ಯಾನೇಜರ್ ಪಿ. ಎಸ್. ಮಳಗಿ ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ಸೋಮವಾರ ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನು ಶ್ರೇಷ್ಠ, ನೀನು ಕನಿಷ್ಠ ಎನ್ನುವ ಕಾಲಘಟ್ಟದಲ್ಲಿ ಜನಿಸಿದ ಅಂಬೇಡ್ಕರರು ಆರ್ಥಿಕವಾಗಿ ಸ್ಥಿತಿವಂತರಾಗಿದ್ದರು. ಆದರೆ, ಕೆಲ ಬರಹಗಾರರು ಜಾತಿ ಆಧಾರದ ಮೇಲೆ ಅಂಬೇಡ್ಕರ್ ಅವರು ಬಡವರಾಗಿದ್ದರು ಎಂದು ತಪ್ಪು ಸಂದೇಶ ನೀಡಿದ್ದಾರೆ. ಅಂದಿನ ಜಾತಿ ವ್ಯವಸ್ಥೆ ಮದ್ಯ ಸಮಾನತೆಯ ಅವಕಾಶಕ್ಕಾಗಿ ಹೋರಾಟ ಮಾಡಿದ್ದಾರೆ. ಅಂತಹ ಮಹಾಪುರುಷನ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವ ಕೆಲಸವಾಗಲಿ ಎಂದರು.

ಪುರಸಭೆ ಅಧ್ಯಕ್ಷೆ ಜಗೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ, ಮುಖಂಡರಾದ ಅಶೋಕ ಚಲವಾದಿ, ಗುರು ಗುಡಿಮನಿ, ಸಂಜೀವ ಕಲ್ಯಾಣಿ, ಸಂಗಮೇಶ ಓಲೇಕಾರ, ತಹಸೀಲ್ದಾರ್ ವೈ. ಎಸ್. ಸೋಮನಕಟ್ಟಿ, ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹಿರೇಮನಿ ಸಂವಿಧಾನ ಪೀಠಿಕೆ ವಾಚಿಸಿದರು.

ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಅರವಿಂದ ಸಾಲವಾಡಗಿ, ರವಿ ನಾಯ್ಕೋಡಿ, ಶಿವಾನಂದ ಮಂಗಾನವರ, ಬಸವನಗೌಡ ಪಾಟೀಲ, ಇಓ ಪ್ರಕಾಶ ದೇಸಾಯಿ, ಪುರಸಭೆ ಮುಖ್ಯಧಿಕಾರಿ ಎಚ್. ಎಸ್. ಚಿತ್ತರಗಿ, ಬಿಇಒ ವಸಂತ ರಾಠೋಡ ಇತರರಿದ್ದರು. ವೀರೇಶ ಹೊನವಾಡ ಸ್ವಾಗತಿಸಿದರು. ರಶ್ಮಿ ರಾಘವೇಂದ್ರ ನಿರೂಪಿಸಿದರು. ಮಕಬುಲ್ ದಫೇದಾರ ವಂದಿಸಿದರು.

ಇದಕ್ಕೂ ಮುನ್ನ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net