ಒಳಮೀಸಲಾತಿ ತಕ್ಷಣ ಜಾರಿಗೊಳಿಸಲಿ

web2
ಕಾಗವಾಡ ತಹಸೀಲ್ದಾರ್ ರಾಜೇಶ ಬುರ್ಲಿ ಅವರಿಗೆ ಮಾದಿಗ ಸಂಘದ ಜಿಲ್ಲಾಧ್ಯಕ್ಷ ಕುಮಾರ ಗಸ್ತಿ ಮನವಿ ಸಲ್ಲಿಸಿದರು. ಮಹಾದೇವ ಹಾದಿಮನಿ, ರಾಜು ರಾಜಂಗಳೆ, ಸಂತೋಷ ಮಾದರ, ಭರಮು ಮಾದರ ಇತರರಿದ್ದರು.
Published on

ಕಾಗವಾಡ: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ತಕ್ಷಣ ಪರಿಶಿಷ್ಟರಿಗೆ ಒಳಮೀಸಲಾತಿ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಸೋಮವಾರ ಕರ್ನಾಟಕ ಪ್ರದೇಶ ಮಾದಿಗರ ಸಂಘ ಹಾಗೂ ಜಿಲ್ಲಾ ಆದಿಜಾಂಬವ ಸೇವಾ ಅಭಿವೃದ್ಧಿ ಸಂಘ, ಮಾದಿಗ ಸಂಘಟನೆಗಳ ಒಕ್ಕೂಟಗಳ ಮೂಲಕ ತಹಸೀಲ್ದಾರ್ ರಾಜೇಶ ಬುರ್ಲಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಪ್ರದೇಶ ಮಾದಿಗರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಗಸ್ತಿ ಮಾತನಾಡಿ, 30 ವರ್ಷ ಹೋರಾಟ ನ್ಯಾಯ ಸಿಕ್ಕಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ತಂದು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಪರಶುರಾಮ ಅವಳೆ ಮಾತನಾಡಿ, ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡಬೇಕು ಎಂದರು.

ಆದಿಜಾಂಬವ ಸೇವಾ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಹಾದೇವ ಹಾದಿಮನಿ, ರಾಜು ರಾಜಂಗಳೆ, ಸಂತೋಷ ಮಾದರ, ಭರಮು ಮಾದರ, ಬಸು ಮಾಂಗ, ರವಿಂದ್ರ ಮಾದರ, ಮಹೇಶ ಮಾದರ, ವಿನೋದ ಮಾದರ, ಸಂಜಯ ಮಾದರ, ಸಂದೀಪ ಮಾದರ, ಮಹೇಶ ಮಾಂಗ, ಅನಿಲ ಮಾಂಗ, ಸುನೀತಾ ಐಹೊಳೆ, ಪರಶುರಾಮ ಮಾದಿಗ, ಶಂಕರ ಪೂಜಾರಿ, ಅನಿಲ ಮಾದಿಗ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net