ಪತಿ-ಪತ್ನಿ ಪ್ರಕರಣ ವರ್ಗಾವಣೆಗೆ ಪರಿಗಣಿಸಲಿ

26 LXR 1
Published on

ಲಕ್ಷ್ಮೇಶ್ವರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ಧರಣಿ ಕೈಗೊಂಡರು. ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ಡಿ.ಎಸ್. ಕುಲಕರ್ಣಿ ಮಾತನಾಡಿ, ಸರ್ಕಾರದಿಂಧ ಕನಿಷ್ಠ ಸೌಲಭ್ಯಗಳನ್ನು ನೀಡದೆ ಹೆಚ್ಚಿನ ಒತ್ತಡವನ್ನು ನಮ್ಮ ಮೇಲೆ ಹೇರುತ್ತಿದ್ದು, ಇದು ನಮಗೆ ಆಗುತ್ತಿರುವ ಅನ್ಯಾಯವಾಗಿದೆ. ರಜಾ ದಿನಗಳಲ್ಲಿಯೂ ಕೆಲಸ ಮಾಡಬೇಕಾಗಿದೆ. ಆನ್‌ಲೈನ್ ತಂತ್ರಾಂಶಗಳ ಮೂಲಕ ಹೆಚ್ಚು ಕೆಲಸ ಮಾಡಬೇಕಾಗಿದೆ. ಅದಕ್ಕೆ ತಕ್ಕಂತೆ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ನೀಡಬೇಕು. ಎಲ್ಲ ಇಲಾಖೆಗಳಲ್ಲಿ ನೀಡುವಂತೆ ನಮಗೂ ಪತಿ- ಪತ್ನಿಯರ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು. ಉಪಾಧ್ಯಕ್ಷ ಎಚ್.ಕೃಷ್ಣಮೂರ್ತಿ, ಎನ್.ಬಿ .ಕನೋಜ, ಪಿ.ಎಲ್. ವಿಭೂತಿ, ಆರ್.ಎನ್. ನೆಗಳೂರ, ಬಿ.ವೈ. ಮಲ್ಲಿಗವಾಡ, ಸುಬೇದಖಾನ್ ಪಠಾಣ, ಅರುಣ ದೊಡ್ಡಮನಿ, ಎನ್.ಐ.ಸೊನ್ನದ, ಸುಷ್ಮಾ ವಡಕಪ್ಪನವರ, ನಿರ್ಮಲಾ ಕೊಪ್ಪದಮಠ, ಲಕ್ಷ್ಮೀ ಓಲೇಕಾರ, ತಸ್ಮೀಯಾ ಮುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net