

ನುಗ್ಗೇಹಳ್ಳಿ: ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸಲು ಯುವ ಜನಾಂಗ ಸಂಸ್ಕಾರವಂತರಾಗಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಸೋಸಲಗೆರೆ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಕಾಲಭೈರವೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಜೀರ್ಣೋದ್ಧಾರಗೊಂಡ ಶ್ರೀ ಆಂಜನೇಯ ಸ್ವಾಮಿ ದೇಗುಲದ ವಿಮಾನ ಗೋಪುರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಆಧ್ಯಾತ್ಮ ಭಾರತದ ಉಸಿರು. ಸಂಸ್ಕೃತಿ, ಸಾಮರಸ್ಯ ಬೆಳೆಸುವುದು ಧರ್ಮದ ಗುರಿಯಾಗಬೇಕು. ಪಾಲಕರು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ತೋಟಿ ಏತ ನೀರಾವರಿ ಯೋಜನೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ಹಂಗಾಮಿಗೆ ಈ ಭಾಗದ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸಲಾಗುವುದು ಎಂದರು. ಗ್ರಾಪಂ ಸದಸ್ಯ ರಾಜಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್.ಪಿ.ನವೀನ್ ಕುಮಾರ್, ದೇಗುಲ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಜೆ.ವಾಸುದೇವ್, ಮುಖಂಡರಾದ ತೋಟಿ ನಾಗರಾಜ್, ಜೆ.ಮಾವಿನಳ್ಳಿ ಸುರೇಶ್, ಭೀಮೇಶ್, ಎಸ್.ಜೆ.ವಿಶ್ವನಾಥ್, ಮಧು, ಚೇತನ್, ದಿಲೀಪ್, ಯದುನಂದನ್, ಹರೀಶ್, ಎಸ್.ಎಂ.ಶಂಕರ್, ಭುವನೇಶ್, ಅಂಗಡಿ ಕೃಷ್ಣಮೂರ್ತಿ, ಎಸ್.ಪಿ.ಚಂದ್ರಶೇಖರ್, ಶಿವಣ್ಣ, ಬಾಲರಾಜು, ಕೆ.ಟಿ.ರಾಮೇಗೌಡ, ಡೇರಿ ಅಧ್ಯಕ್ಷ ಎಸ್.ಪಿ.ರಘು, ಧಮೇರ್ಂದ್ರ ಹಾಜರಿದ್ದರು.