ಹಿಡಕಲ್ ಕಂದಾಯ ಗ್ರಾಮವಾಗಲಿ

20Uk1
Published on

ಉಳ್ಳಾಗಡ್ಡಿ-ಖಾನಾಪುರ: ಹಿಡಕಲ್ ಜಲಾಶಯ ಜನವಸತಿ ಪ್ರದೇಶವನ್ನು ಕಂದಾಯ ಗ್ರಾಮವಾಗಿಸುವ ಕುರಿತು ಸ್ಥಳೀಯ ಶಾಸಕರೊಂದಿಗೆ ಸಮಾಲೋಚಿಸಲಾಗುವುದು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಸಮೀಪದ ಹಿಡಕಲ್ ಜಲಾಶಯದ ಬಸ್ ನಿಲ್ದಾಣದ ಆವರಣದಲ್ಲಿರುವ ಗಣಪತಿ ದೇವಸ್ಥಾನದ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಅವರು, ಜಲಾಶಯ ವಸತಿ ಪ್ರದೇಶದಲ್ಲಿ ಸೂಕ್ತ ಸ್ಥಳ ಗುರುತಿಸಿ, ಶೀಘ್ರವೇ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಸಾಹಿತಿ ಎಸ್.ಎಂ.ಶಿರೂರ ಮಾತನಾಡಿ, ಹಿಡಕಲ್ ಜಲಾಶಯ ವಸತಿ ಪ್ರದೇಶ ನೀರಾವರಿ ಇಲಾಖೆಯ ಅಧೀನದಲ್ಲಿದ್ದು, ಇಲ್ಲಿನ ಜನರಿಗೆ ಅಗತ್ಯ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಾನೂನು ತೊಡಕು ನಿವಾರಿಸಿ ಕೂಡಲೇ ಕಂದಾಯ ಗ್ರಾಮವಾಗಿ ಮಾರ್ಪಡಿಸಬೇಕು ಎಂದು ಆಗ್ರಹಿಸಿದರು.

ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ಹತ್ತರಗಿಯ ಕಾರಿಮಠದ ಗುರುಸಿದ್ಧ ಶ್ರೀಗಳು ಆಶೀರ್ವಚನ ನೀಡಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಕಲಗೌಡ ಪಾಟೀಲ, ಪ್ರಜ್ವಲ ನಿಲಜಗಿ,ಅಭಿಷೇಕ ಪಾಟೀಲ, ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತ ರವಿ ತಾಳೂರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಎಂ.ಎಸ್.ಹೊಸಮನಿ, ಜಗದೀಶ್ ಬಿ.ಕೆ., ಆರ್. ಕರುಣಾಕರ ಶೆಟ್ಟಿ, ಗಣೇಶ ಪೂಜಾರ, ಶರಣಪ್ಪ ಕಡದಿನ್ನಿ, ಗಜಾನನ ದೇವಸ್ಥಾನ ಸೇವಾ ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net