ಎಚ್‌ಡಿಕೆ ಮತ್ತೆ ಸಿಎಂ ಆಗಿ ದೀನರಿಗೆ ಸುಸ್ತಿರ ಬದುಕು ಕಟ್ಟಿಕೊಡಲಿ

16 mlv 3
ಮಳವಳ್ಳಿ ಪಟ್ಟಣದ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಪುಟ್ಟಸ್ವಾಮಿ, ಟಿ.ನಂದಕುಮಾರ್, ಪ್ರಶಾಂತ್, ಸಿದ್ದರಾಜು, ಡಿ.ಜಯರಾಮು, ವಿ.ಎಂ.ವಿಶ್ವನಾಥ್, ಚಿಕ್ಕಮುಲಗೂಡು ಪುಟ್ಟುಬುದ್ದಿ, ಪ್ರಭು, ಚಂದಳ್ಳಿ ಶ್ರೀಧರ್, ಸಿದ್ದಚಾರಿ, ಕಂಬರಾಜು, ಅಕ್ಕಿಕೃಷ್ಣ ಇದ್ದರು.
Published on

ಮಳವಳ್ಳಿ: ರಾಜ್ಯದ ರೈತರ ಸಾಲ ಮನ್ನಾ ಮಾಡಿದಂತಹ ಹಾಗೂ ಜನಸಾಮಾನ್ಯರು ಮೆಚ್ಚಿದಂತಹ ಆಡಳಿತ ನೀಡಿದ ಏಕೈಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಿಎಂ ಆಗುವ ಮೂಲಕ ನಾಡಿನಲ್ಲಿರುವ ದೀನರಿಗೆ ಸುಸ್ತಿರ ಬದುಕು ಕಟ್ಟಿಕೊಡುವ ಆಶಾಕಿರಣವಾಗಬೇಕೆಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ 65ನೇ ಜನ್ಮದಿನದ ಪ್ರಯುಕ್ತ ಪಟ್ಟಣದ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೋಮವಾರ ನೂರಾರು ಜೆಡಿಎಸ್ ಕಾರ್ಯಕರ್ತರೊಡಗೂಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕೃಷಿಯಿಂದ ಸಾಲದ ಸೂಲಕ್ಕೆ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದ ಅನ್ನದಾತರ ಸಾಲ ಮನ್ನಾ ಮಾಡುವಂತಹ ದಿಟ್ಟ ನಿರ್ದಾರ ಕೈಗೊಂಡಿದ್ದರು. ಪ್ರಸ್ತುತ ಕೇಂದ್ರ ಸಚಿವರಾಗಿ ನಾಡಿನ ಸಾಮಾನ್ಯ ವರ್ಗದವರಿಗೂ ಸರ್ಕಾರದ ಸೌಲಭ್ಯಗಳು ತಲುಪವಂತೆ, ಎಲ್ಲ ವರ್ಗದವರೂ ಮೆಚ್ಚಿದಂತಹ ಆಡಳಿತ ನಡೆಸುತ್ತಿರುವ ಕುಮಾರಸ್ವಾಮಿ ಅವರು ಆರೋಗ್ಯವಂತರಾಗಿ ಉತ್ತಮ ಜನಸೇವೆ ಮಾಡಲೆಂದು ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು.

ನಂತರ ತಾಲೂಕು ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವುರ ಜತೆಗೆ ಅನಂತರ್ ವೃತ್ತದಲ್ಲಿ ನೆರೆದವರಿಗೆ ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು.

ಪುರಸಭೆ ಸದಸ್ಯ ಪುಟ್ಟಸ್ವಾಮಿ, ಸದಸ್ಯರಾದ ಟಿ.ನಂದಕುಮಾರ್, ಪ್ರಶಾಂತ್, ಸಿದ್ದರಾಜು, ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಡಿ.ಜಯರಾಮು, ಜಿಲ್ಲಾ ಯುವಘಟಕ ಅಧ್ಯಕ್ಷ ರವಿ, ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಮುಖಂಡರಾದ ಚಿಕ್ಕಮುಲಗೂಡು ಪುಟ್ಟುಬುದ್ದಿ, ಕೃಷ್ಣಮೂರ್ತಿ, ಮೆಹಬೂಬ್ ಪಾಷ, ಆನಂದ, ಚೊಟ್ಟನಹಳ್ಳಿ ಕೆಂಪಲಿಂಗು, ಚಂದಳ್ಳಿ ಶ್ರೀಧರ್, ಸಿದ್ದಚಾರಿ, ಕಂಬರಾಜು, ಅಕ್ಕಿಕೃಷ್ಣ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net