ಸಾಮರಸ್ಯ ಜೀವನದ ಮಂತ್ರವಾಗಿರಲಿ

IMG_20230312_143748
ಗುರುಗುಂಟಾ ಸಮೀಪದ ರಾಯದುರ್ಗದ ವೈರಾಗ್ಯವೀರ ಗುರುಚನ್ನವೀರ ಶಿವಯೋಗಿಗಳ ಪುಣ್ಯರಾಧನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಂಸ್ಥಾನಿಕ ರಾಜಾ ಸೋಮನಾಥ ನಾಯಕ ಭಾನುವಾರ ಮಾತನಾಡಿದರು. ಅರಳಹಳ್ಳಿಯ ವೇದಮೂರ್ತಿ ಚನ್ನಯ್ಯಸ್ವಾಮಿ, ಪ್ರಮುಖರಾದ ವೆಂಕಟೇಶ ಗುತ್ತೇದಾರ್, ಆರ್.ಜನಾದನ್ ಶ್ರೇಷ್ಟಿ, ನಾಗರಾಜ್ ಹರ್ವಾಪುರ, ಬಸವರಾಜ ಹರ್ವಾಪುರ ಇದ್ದರು.
Published on

ಗುರುಗುಂಟಾ: ಗುರು ಚನ್ನವೀರ ಶಿವಯೋಗಿಗಳ ಲೀಲೆ ಅಗಾಧವಾಗಿದ್ದು, ಭಕ್ತರ ಸಹಕಾರದೊಂದಿಗೆ 25 ವರ್ಷಗಳಿಂದ ಜಾತ್ರೆ ನಡೆಯುತ್ತಿದೆ ಎಂದು ಸಂಸ್ಥಾನಿಕ ರಾಜಾ ಸೋಮನಾಥ ನಾಯಕ ಹೇಳಿದರು.

ರಾಯದುರ್ಗದಲ್ಲಿ ವೈರಾಗ್ಯವೀರ ಗುರು ಚನ್ನವೀರ ಶಿವಯೋಗಿಗಳ ಪುಣ್ಯರಾಧನೆ ಹಾಗೂ ಜಾತ್ರೋತ್ಸವದಂಗವಾಗಿ ಭಾನುವಾರ ಮಠದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಜೋಡಿಗಳು ಸಾಮರಸ್ಯದೊಂದಿಗೆ ಜೀವನ ನಡೆಸಬೇಕು. ತವರು ಮತ್ತು ಗಂಡನ ಮನೆಯ ಗೌರವ ತರುವಂತೆ ಬಾಳಬೇಕೆಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net