

ಬೈಲಹೊಂಗಲ: ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಗೆ ನೇಗಿಲಯೋಗಿ ರೆತ ಸೇವಾ ಸಂದ ಜಿಲ್ಲಾಧ್ಯ ಶಂಕರ ಬೋಳನ್ನವರ ನೇತತ್ವದಲ್ಲಿ ರೆತರು ಬುಧವಾರ ನಯಾನಗರ ಸಮೀಪ ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಮಲಪ್ರಭಾ ನದಿಗೆ ಮಹಾದಾಯಿ, ಕಳಸಾ&ಬಂಡೂರಿ ನಾಲಾ ಜೋಡಣೆ ಯೋಜನೆ ಜಾರಿಗಾಗಿ ಕೇಂದ್ರ, ರಾಜ್ಯ ಸರ್ಕಾರ ಶ್ರಮಿಸಬೇಕು. ದೇಶಕ್ಕೆ ಅನ್ನ ನೀಡುವ ರೆತರ ಸಮಸ್ಯೆಗಳಿಗೆ ಸರ್ಕಾರ ಬೆನ್ನೆಲುಬಾಗಿ ನಿಂತು ಕೆಲಸ ಮಾಡಬೇಕು. ಪ್ರಥಮ ಬಾರಿಗೆ ನೇಗಿಲಯೋಗಿ ರೈತ ಸೇವಾ ಸಂದಿಂದ ಮಲಪ್ರಭಾ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಈ ಭಾಗದ ಜನರ ಜೀವನಾಡಿಯಾಡಿ ಮಲಪ್ರಭಾ ನದಿ ಅನುಕೂಲವಾಗಿದ್ದು, ಕಾಮಧೇನು ಕಲ್ಪವವಾಗಿದೆ ಎಂದರು.
ಸಂದ ತಾಲೂಕಾಧ್ಯ ಸೋಮಲಿಂಗಪ್ಪ ಮೆಳ್ಳಿಕೇರಿ ಮಾತನಾಡಿ, ಮಲಪ್ರಭಾ ನದಿ ತಾಯಿ ಸಮಾನ. ಮಲಪ್ರಭಾ ನದಿ ಸಮೃದ್ಧವಾಗಿ ಹರಿಯಲಿ. ಈ ಭಾಗದ ಜನರ ಬದುಕು ಹಸನಾಗಲಿ ಎಂದರು.
ವೇ.ಮೂ ಮಹಾಂತಯ್ಯಶಾಸಿ ತೆಗ್ಗಿನಮಠ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಸಂದ ಸದಸ್ಯರಾದ ಮಹಾಂತೇಶ ಬೋಳನ್ನವರ, ಅನಿಲ ಗಿರನವರ, ಶಂಕರಗೌಡ ಪಾಟೀಲ, ಮುದಕಪ್ಪ ತೋಟಗಿ, ಮೋಹನ ವಕ್ಕುಂದ, ಮೌಲಿ ನಲವಡೆ, ಬಸವರಾಜ ಜಂಬಗಿ, ರಮೇಶ ಮರಕುಂಬಿ, ಮಡಿವಾಳಪ್ಪ ಚಿಕ್ಕೊಪ್ಪ, ಅದಶ್ಯಪ್ಪ ಹುಚ್ಚನ್ನವರ, ಮಡಿವಾಳಪ್ಪ ಬುಡಶೆಟ್ಟಿ, ರಾಯಪ್ಪ ಮರೆಕ್ಕನವರ, ಬಾಬು ಸಂಗೊಳ್ಳಿ, ಪ್ರವಿಣ ಬೋಳನ್ನವರ, ಮಹೇಶ ಬೋಳನ್ನವರ, ಗೌಡಪ್ಪ ಹೊಸಮನಿ, ಅಯ ಬೋಳನ್ನವರ ಇತರರಿದ್ದರು.