

ವಿಜಯಪುರ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಸಾಧನೆಗೈಯುತ್ತಿದ್ದಾರೆ ಎಂದು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕ್ರೀಡೆ, ಸಾಂಸ್ಕೃತಿಕ, ಸ್ಕೌಟ್ಸ್ ಮತ್ತು ಗೈಡ್ಸ್, ಇಎಲ್‌ಸಿ., ಎನ್‌ಎಸ್‌ಎಸ್, ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸರ್ಕಾರಿ ಕಾಲೇಜು ಎಂದು ಕೀಳರಿಮೆ ಪಡದೆ ಸಾಧನೆಗೆ ಮುಂದಾಗಬೇಕು. ಹಲವು ಜನ ಸಾಧಕರು ಸರ್ಕಾರಿ ಕಾಲೇಜುಗಳಲ್ಲಿಯೇ ಕಲಿತವರಾಗಿದ್ದಾರೆ. ಅವರನ್ನು ಸ್ಫೂರ್ತಿಯಾಗಿಸಿಕೊಂಡು ತಮಗಿರುವ ಸರ್ಕಾರಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅತಿಥಿ ಮಹಿಳಾ ವಿವಿಯ ದೈಹಿಕ ನಿರ್ದೇಶಕ ಡಾ. ಹನುಮಂತಯ್ಯ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಬಗ್ಗೆ ಬದ್ಧತೆ, ಆತ್ಮಸ್ಥೈರ್ಯ, ಆತ್ಮವಿಶ್ವಾಸ ಹೊಂದಬೇಕು. ಅಲ್ಲದೆ, ಶ್ರದ್ಧೆ, ನಿಷ್ಟೆಯಿಂದ ಅಧ್ಯಯನ ನಡೆಸಿದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ಪ್ರಾಚಾರ್ಯ ಡಾ. ಆರ್.ಎಸ್. ಕಲ್ಲೂರಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಚ್.ಎಚ್. ಹಿರೇಮಠ, ಎಚ್. ವೆಂಕಟೇಶ, ಮಲ್ಲಮ್ಮ ಜೋಗೂರ, ಶಂಕರ ಹೂಗಾರ, ವಿಠ್ಠಲ ಮೇಲಿನಮನಿ, ಪಾಂಡು ಸಾಹುಕಾರ ದೊಡಮನಿ, ಸಿ.ಬಿ. ನಾಟೀಕಾರ, ಉಪನ್ಯಾಸಕರಾದ ಡಾ. ಚಿದಾನಂದ ಆನೂರ, ಭಾರತಿ ಹೊಸಟ್ಟಿ, ದಾವಲಸಾ ಪಿಂಜಾರ, ಎಂ.ಆರ್. ಕೆಂಭಾವಿ, ರಮೇಶ ಬಳ್ಳೊಳ್ಳಿ, ಭಾರತಿ ಹಾಲು, ಅರ್ಪಿತಾ ಪಾಟೀಲ, ಅನಂತ ಪದ್ಮನಾಭ ಸರವಂದಿ, ವಿ.ಸಿ. ಕುಲಕರ್ಣಿ, ಆನಂದ ಕುಲಕರ್ಣಿ, ರಾಮಣ್ಣ ಕಳ್ಳಿ, ರಾಘವೇಂದ್ರ ಗುರಜಾಲ, ರಾಜೇಶ್ವರಿ ಪುರಾಣಿಕ, ಬೌರಮ್ಮ, ಸವಿತಾ ಚವ್ಹಾಣ, ನಾತುರಾಮ ಜಾಧವ, ಮಂಜುನಾಥ ಗಾಣಿಗೇರ, ಆಸೀಫ್ ರೋಜಿನದಾರ, ಅಸಾದುಲ್ಲಾ, ತನ್ವಿರ ಗೊಡೆಸವಾರ, ನೀಲಕಂಠ ಹಳ್ಳಿ, ಶೋಭಾ ರುದ್ರಗೌಡರ, ಶಿವಾನಂದ ಸಾಂಗೋಲಿ, ವೀರನಗೌಡ ಪಾಟೀಲ, ನವಿನಗೌಡ ಪಾಟೀಲ, ಸುಜಾತಾ ಬಿರಾದಾರ ಇತರರಿದ್ದರು.
ಎಂ.ಆರ್. ಜೋಶಿ ಸ್ವಾಗತಿಸಿ ಪರಿಚಯಿಸಿದರು. ಲಕ್ಷ್ಮೀ ಮೋರೆ ನಿರೂಪಿಸಿದರು. ರಾಜಶೇಖರ ಬೆನಕನಹಳ್ಳಿ ಬಹುಮಾನ ವಿತರಿಸಿದರು. ಪಿ.ಬಿ. ಬಿರಾದಾರ ವಂದಿಸಿದರು.