ಸ್ವಾರ್ಥ ಬಿಟ್ಟು ಪರೋಪಕಾರಿಯಾಗಿ ಬದುಕಬೇಕು

16-12-Shiva-4
ರಾಯಚೂರು ತಾಲೂಕಿನ ಹೊಸಪೇಟೆಯ ಕೆಂಪಿನಮಠದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಕೆಂಪಿನಮಠದ ಪೀಠಾಪತಿ ಸಿದ್ಧಲಿಂಗ ಸ್ವಾಮೀಜಿ, ಪಂಚಮಸಿದ್ಧಲಿಂಗ ಸ್ವಾಮೀಜಿ, ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಅಡವಿಸಿದ್ಧರಾಮ ಸ್ವಾಮೀಜಿ, ಶಂಭುನಾಥ ಶಿವಾಚಾರ್ಯ ಸ್ವಾಮೀಜಿ, ಕಲ್ಲೂರಿನ ಶಂಭುಲಿಂಗ ಸ್ವಾಮೀಜಿ ಇದ್ದರು.
Published on

ರಾಯಚೂರು: ದೀಪ ತನ್ನ ದೇಹವನ್ನು ಸುಟ್ಟುಕೊಂಡು ಇತರರಿಗೆ ಬೆಳಕು ನೀಡುವಂತೆ ಮನುಷ್ಯ ತನ್ನಲ್ಲಿರುವ ಸ್ವಾರ್ಥವನ್ನು ಬಿಟ್ಟು ಪರೋಪಕಾರಿಯಾಗಿ ಬದುಕಿದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ ಎಂದು ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಹೊಸಪೇಟೆ ಗ್ರಾಮದಲ್ಲಿನ ಕೆಂಪಿನಮಠದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಅಜ್ಞಾನವೆಂಬ ಅಂಧಕಾರವನ್ನು ತೊಲಗಿಸಲು ಸುಜ್ಞಾನವೆಂಬ ದೀಪ ಬೆಳಗಿಸಬೇಕು. ಮನುಷ್ಯನ ಸರ್ವದೋಷಗಳ ಮುಕ್ತಿಗೆ ದೀಪೋತ್ಸವ ಪೂರಕವಾಗಿದೆ ಎಂದರು.
ಸಮಾಜದಲ್ಲಿ ಸಮಾನತೆ, ಶಾಂತಿ, ಸಹಬಾಳ್ವೆಗೆ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ. ಪ್ರಸಕ್ತ ಸಾಲಿನಲ್ಲಿ ಬರದಿಂದ ರೈತರು ಸಂಕಷ್ಟದಲ್ಲಿದ್ದು, ಇಂತಹ ಕಠಿಣ ಸಂದರ್ಭದಲ್ಲಿ ಆಡಂಬರ ಬಿಟ್ಟು ವೆಚ್ಚಗಳ ಹಿಡಿತ ಸಾಸಬೇಕು ಎಂದು ಹೇಳಿದರು.
ಕೆಂಪಿನಮಠದ ಪೀಠಾಪತಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಪ್ರತಿದಿನ ದೇವರ ಮುಂದೆ ದೀಪ ಹಚ್ಚುವುದು ಕೆಲ ದಿನ ತಪ್ಪಬಹುದು. ಅದನ್ನು ಸರಿದೂಗಿಸಲು ಇಂತಹ ದೀಪೋತ್ಸವ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಮಠಗಳು ಎಲ್ಲ ಜಾತಿ ಧರ್ಮಗಳಿಗೆ ಆಶ್ರಯ ತಾಣಗಳಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೇರಡಗಂನ ಪಂಚಮಸಿದ್ಧಲಿಂಗ ಸ್ವಾಮೀಜಿ, ನೀಲಗಲ್‌ನ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಗುರುಮಿಠಕಲ್‌ನ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಶಿವಪುರದ ಅಡವಿಸಿದ್ಧರಾಮ ಸ್ವಾಮೀಜಿ, ಸುಲ್ತಾನಪುರದ ಶಂಭುನಾಥ ಶಿವಾಚಾರ್ಯ ಸ್ವಾಮೀಜಿ, ಕಲ್ಲೂರಿನ ಶಂಭುಲಿಂಗ ಸ್ವಾಮೀಜಿ, ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net