ಕೆಲಸ ಮುಗಿದ ತಕ್ಷಣ ಮನೆಗೆ ಹೋಗಲು ಬಿಡಿ

Let go home as soon as work is done
ಕಮತಗಿ ಸಮೀಪದ ಮುಗನೂರ ಗ್ರಾಮ ಪಂಚಾಯಿತಿ ಎದುರು ಎನ್‌ಆರ್‌ಇಜಿ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
Published on

ಕಮತಗಿ: ಎನ್‌ಆರ್‌ಇಜಿಯಿಂದ ಕಾರ್ಮಿಕರಿಗೆ ನಿತ್ಯ ನೀಡಿರುವ ಕೆಲಸ ಮುಗಿದ ಕೂಡಲೇ ಮನೆಗೆ ಹೋಗಲು ಬಿಡಬೇಕೆಂದು ಆಗ್ರಹಿಸಿ ಕೂಲಿ ಕಾರ್ಮಿಕರು ಮುಗನೂರ ಗ್ರಾಮ ಪಂಚಾಯಿತಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಗ್ರಾಪಂ ವಾಪ್ತಿಯ 8 ಹಳ್ಳಿಗಳ ಕೂಲಿ ಕಾರ್ಮಿಕರು ಗ್ರಾಪಂಗೆ ಆಗಮಿಸಿ, ಎನ್‌ಆರ್‌ಇಜಿ ಕಾಮಗಾರಿಯಲ್ಲಿ ಪಾಲ್ಗೊಳ್ಳುವ ಕೂಲಿ ಕಾರ್ಮಿಕರು ತಮಗೆ ಒಪ್ಪಿಸಿದ ಕೆಲಸ ಮುಗಿದ ಬಳಿಕವೂ ಸಂಜೆ 5 ಗಂಟೆವರೆಗೆ ಕಾಮಗಾರಿ ಕೈಗೊಂಡ ಸ್ಥಳದಲ್ಲೇ ಇರಬೇಕೆಂದು ಮುಗನೂರ ಗ್ರಾಪಂ ಪಿಡಿಒ ಮೌಖಿಕ ಸೂಚನೆ ನೀಡಿದ್ದನ್ನು ವಿರೋಧಿಸಿದರು.

ಪಿಡಿಒ ಪಿ.ಬಿ. ಮುಳ್ಳೂರ ಸ್ಥಳಕ್ಕೆ ಆಗಮಿಸಿ, ಕೆಲಸ ಮುಗಿದ ಬಳಿಕ ಹಾಜರಿ ಹಾಕಿ ಮನೆಗೆ ತೆರಳಬಹುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರು.

ಯಮನಪ್ಪ ಅಂತರಗೊಂಡ, ಮಲ್ಲು ಅಂತರಗೊಂಡ, ಶರೀಫ್ ಚಪ್ಪರಬಂದ, ಕರಿಬಸವ್ವ ಹುಣಕುಂಟಿ, ಸಂಗಮೇಶ ಮಾದರ, ರಮೇಶ ಹೂವಿನಹಳ್ಳಿ ಸೇರಿ ಮುಗನೂರ, ಮರಡಿಬೂದಿಹಾಳ, ಬಸವನಾಳ, ಅಂಬ್ಲಿಕೊಪ್ಪ, ಸುರಳಿಕಲ್ಲ, ಕಡಿವಾಲ-ಕಲ್ಲಾಪುರ, ಯರನಾಯ್ಕನಾಳ, ಬಸರಿಕಟ್ಟಿ ಗ್ರಾಮದ 600ಕ್ಕೂ ಹೆಚ್ಚು ಕೂಲಿಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net