ಹೆಣ್ಣು ಮಕ್ಕಳು ಪ್ರೌಢಶಾಲೆ ಸದುಪಯೋಗ ಪಡೆಯಲಿ

3RAIBAG1
Published on

ರಾಯಬಾಗ: ಗ್ರಾಮೀಣ ಹೆಣ್ಣು ಮಕ್ಕಳು ಪ್ರೌಢಶಾಲೆ ಶಿಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಪ್ರಾಥಮಿಕ ಶಾಲೆ ಮೇಲ್ದರ್ಜೆಗೇರಿಸಿ ಪ್ರೌಢಶಾಲೆ ಪ್ರಾರಂಭಿಸುತ್ತಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ತಾಲೂಕಿನ ಮಂಟೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉನ್ನತಿಕರಿಸಿದ ಪ್ರೌಢಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮ ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಣ ಪಡೆದು ಶಾಲೆ, ಗ್ರಾಮಕ್ಕೆ ಕೀರ್ತಿ ತರಬೇಕೆಂದರು.

ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ಬಡ ವಿದ್ಯಾರ್ಥಿಗಳು ಉನ್ನತ ಶಿಣ ಪಡೆಯಲು ಅನುಕೂಲವಾಗಲು ಸರ್ಕಾರ ಪ್ರಾಥಮಿಕ ಶಾಲೆ ಉನ್ನತಿಕರಿಸಿದೆ. ಶಾಲೆ ಪ್ರಗತಿಗಾಗಿ ಗ್ರಾಮಸ್ಥರು, ಶಿಕರು, ಪಾಲಕರು ಮತ್ತು ಎಸ್​ಡಿಎಂಸಿ ಕೆಜೋಡಿಸಬೇಕು. ಶಿಕರು ಮಕ್ಕಳಿಗೆ ಒಳ್ಳೆಯ ಶಿಣದ ಜತೆಗೆ ಸಂಸ್ಕಾರ ನೀಡಬೇಕೆಂದರು.

ಭೆಂಡವಾಡ ವಿರಕ್ತಮಠದ ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್​., ಎಸ್​ಡಿಎಂಸಿ ಅಧ್ಯ ರಾಮಚಂದ್ರ ಉಪ್ಪಾರ, ಗ್ರಾಪಂ ಅಧ್ಯೆ ಶೋಭಾ ಮೇಗಾಡೆ, ಸದಸ್ಯೆ ಮಲ್ಲವ್ವ ಮೇಟಿ, ಪಿಎಸ್​ಐ ನರಸಿಂಹರಾಜು, ಶಿವು ಪಾಟೀಲ, ಅಪ್ಪಾಸಾಬ ದೇಸಾಯಿ, ಬಸಪ್ಪ ಮುಗಳಿ, ಸದಾಶಿವ ಕೊಳವಿ, ವಿನೋದ ಚವ್ಹಾನ, ಆರ್​.ಪಿ.ಲಮಾಣಿ ಹಾಗೂ ಶಿಕರು, ಎಸ್​ಡಿಎಂಸಿ ಸದಸ್ಯರು, ಗ್ರಾಮದ ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net