

ಹುಕ್ಕೇರಿ: ಶಾಲಾ ಹಾಜರಾತಿ ಹೆಚ್ಚಿಸುವ ಜತೆಗೆ ಮಕ್ಕಳಿಗೆ ಗುಣಮಟ್ಟದ ಊಟೋಪಚಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮಧ್ಯಾಹ್ನ ಬಿಸಿಯೂಟ, ಹಾಲು ಹಾಗೂ ಹಣ್ಣು ನೀಡುತ್ತಿದೆ. ಪ್ರತಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ಪ್ರತ್ಯೇಕ ಅಡುಗೆ ಕೋಣೆ ನಿರ್ಮಿಸಲಾಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ತಾಲೂಕಿನ ಶಿರಹಟ್ಟಿ ಬಿ.ಕೆ.ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಅಂದಾಜು 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ನೀಡುವ ಕುಡಿಯುವ ನೀರು ಮತ್ತು ಆಹಾರ ಶುಚಿತ್ವಕ್ಕೆ ಅಡುಗೆ ಸಿಬ್ಬಂದಿ ಆದ್ಯತೆ ನೀಡಬೇಕು. ಊಟೋಪಚಾರದ ವ್ಯವಸ್ಥೆ ಜತೆಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.
ಗಣ್ಯರನ್ನು ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಲಾಯಿತು. ಬಿಇಒ ಪ್ರಭಾವತಿ ಪಾಟೀಲ, ಗ್ರಾಪಂ ಅಧ್ಯಕ್ಷ ಸೈಯದ್ ಅಮ್ಮಣಗಿ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಪಡದಾರ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ ಬ್ಯಾಳಿ, ಮುಖಂಡರಾದ ಅಣ್ಣಪ್ಪ ಬ್ಯಾಳಿ, ಸತ್ಯಪ್ಪ ಹಾಲಟ್ಟಿ, ಯಲ್ಲಪ್ಪ ಢಪರಿ, ಆನಂದ ದಪ್ಪಾದೂಳಿ, ರಾಮಣ್ಣ ಗೋಟೂರಿ, ದಾದಾ ದಪ್ಪಾದೂಳಿ, ರಮೇಶ ಹುಂಜಿ, ಮುಖ್ಯಶಿಕ್ಷಕಿ ಲಲಿತಾ ಸೌದಾಗರ ಇತರರಿದ್ದರು.