ಜಾನಪದ ಸಾಹಿತ್ಯಕ್ಕೆ ಮನ್ನಣೆ ಸಿಗಲಿ

26RAM1
Published on

ರಾಮದುರ್ಗ: ತಲ&ತಲಾಂತರಗಳಿಂದ ಬಂದಿರುವ ಜಾನಪದ ಸಾಹಿತ್ಯಕ್ಕೆ ತನ್ನದೇ ಆದ ಮಹತ್ವವಿದ್ದು, ಅಂತಹ ಜೀವಂತ ಜಾನಪದ ಕಲೆಯನ್ನು ಸರ್ಕಾರಗಳು ರ್ನಿಲಸಿವೆ. ಜಾನಪದ ಕಲಾವಿದರಿಗೆ ಸರ್ಕಾರ ಹಾಗೂ ಸಮಾಜ ಹೆಚ್ಚು ಪ್ರೋತ್ಸಾಹ ನೀಡಬೇಕಿದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವದ್ಧಿ ಪ್ರಾಧಿಕಾರ ಸದಸ್ಯ ಅಶೋಕ ಚಂದರಗಿ ಆಶಯ ವ್ಯಕ್ತಪಡಿಸಿದರು.

ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಹೊರಾಂಗಣ ಆವರಣದಲ್ಲಿ ತಾಲೂಕಿನ ಅವರಾದಿ ಶಿವಪೇಟೆಯ ಓಂ ಶಿವ ಮೇಳ ತಂಡ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ 8ನೇ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಜಾನಪದ ಕಲಾವಿದರನ್ನು ಬೆಳೆಸುತ್ತಿರುವ ಸಿದ್ದು ಮೋಟೆ ಅವರೇ ಒಂದು ಜಾನಪದ ಭಂಡಾರ. ಸಿನಿಮಾ ಹಾಡುಗಳ ಟ್ರೆಂಡ್​ ಕೇವಲ 2&3 ತಿಂಗಳು. ಆದರೆ, ಜಾನಪದ ಸಾಹಿತ್ಯ ಚಲನಚಿತ್ರ ಸಾಹಿತ್ಯಕ್ಕಿಂತ ಭಿನ್ನ. ಹಳ್ಳಿ ಹಳ್ಳಿಯಲ್ಲಿರುವ ಜಾನಪದ ಕಲಾವಿದರಿಗೆ ತಿಂಗಳ ಮಾಸಾಶನ ಸೇರಿ ಅಗತ್ಯ ಪ್ರೋತ್ಸಾಹ ನೀಡಲು ಸರ್ಕಾರಗಳು ಶ್ರಮಿಸಲಿ ಎಂದು ಸಲಹೆ ನೀಡಿದರು.

ವಿರಕ್ತಮಠ ಟ್ರಸ್ಟ್​ ಕಮಿಟಿ ಅಧ್ಯ ಪ್ರದಿಪ ಪಟ್ಟಣ ಮಾತನಾಡಿ, ರಾಮದುರ್ಗ ತಾಲೂಕು ಜಾನಪದ ಕಲೆಗಳ ತವರೂರು ಎಂದು ಹೇಳಿದರು. ಸಿದ್ದು ಮೋಟೆ ಪ್ರಾಸ್ತಾವಿಕ ಮಾತನಾಡಿದರು. ಡೊಳ್ಳಿನ ಹಾಡುಗಾರ ಸೋಮಲಿಂಗ ಧನಗೊಂಡ, ಸಾಹಿತಿ ಡಾ.ರಾಜೇಂದ್ರ ಅಣ್ಣಾನವರ, ಜಾನಪದ ಕಲಾವಿದೆ ಯಲ್ಲವ್ವ ಮಾದರ, ಧರೆಪ್ಪ ಅಕಿವಾಟೆ ಹಾಗೂ ಸಾವಯವ ಕಷಿಕ ಶಿವಪ್ಪ ನಿರಾಕಾರಿ ಅವರಿಗೆ ಜಾನಪದ ಶಿವೋತ್ಸವ ಪ್ರಶಸ್ತಿ ಪ್ರದಾನ ಹಾಗೂ ದಾನಿಗಳಿಗೆ ಸನ್ಮಾನ ಮಾಡಲಾಯಿತು. ವಿವಿಧ ಜಾನಪದ ಕಲಾ ತಂಡದವರಿಂದ ವೆವಿಧ್ಯಮಯ ಕಾರ್ಯಕ್ರಮ ಮತ್ತು ಜಾನಪದ ಒಡ್ಡೋಲಗ ಜರುಗಿದವು.

ಅಧ್ಯತೆ ವಹಿಸಿದ್ದ ಶರಣ ಸಂಗನಗೌಡ ಪಾಟೀಲ, ಶಿವಕುಮಾರ ದೊಡಮನಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಿವಕ್ಕ ಮಾದರ, ಅಡಿವೆಪ್ಪ ಅವತಾಳೆ, ಡಾ.ಎಂ.ಎನ್​. ಸಿದ್ಧಗಿರಿ, ಪಡಿಯಪ್ಪ ಕ್ವಾರಿ, ಶಿವರಾಜ ಹಲ್ಯಾಳ, ಪ್ರಕಾಶ ಕೊರಬು, ಗೆಬುಸಾಬ್​ ಜೆನೇಖಾನ್​, ಪ್ರೆಸ್​ ಕ್ಲಬ್​ ಅಧ್ಯ ಮಲ್ಲಿಕಾರ್ಜುನ ಧೂಪದ, ರವಿ ಗಡದೆ, ಮಂಜುಳಾ ಮೂಡ್ಲವರ, ಆಶಾ ಹರಗೋಲ, ಮಾರುತಿ ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net