ರೈತರು ಸೋಲಾರ ಅಳವಡಿಸಿಕೊಳ್ಳಲು ಮುಂದಾಗಲಿ

mbl 9-1 cs
ಮುದ್ದೇಬಿಹಾಳದ ಹೆಸ್ಕಾಂ ಸ್ಟೇಷನ್‌ನಲ್ಲಿ ಟಿಸಿ ದುರಸ್ತಿ ಘಟಕವನ್ನು ಸ್ವಿಚ್ ಹಾಕುವ ಮೂಲಕ ಶಾಸಕ ಸಿ.ಎಸ್. ನಾಡಗೌಡ ಚಾಲನೆ ನೀಡಿದರು. ಸಿ.ಬಿ.ಅಸ್ಕಿ, ಶಿವಶಂಕರಗೌಡ ಹಿರೇಗೌಡರ, ಸಿದ್ದರಾಮ ಬಿರಾದಾರ ಇತರರಿದ್ದರು.
Published on

ಮುದ್ದೇಬಿಹಾಳ: ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಮುದ್ದೇಬಿಹಾಳದ ಹೆಸ್ಕಾಂ ಸ್ಟೇಷನ್‌ನಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಹಾಗೂ ಪರೀಕ್ಷಣಾ ಕೇಂದ್ರ ಪ್ರಾರಂಭಿಸಲಾಗಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.

ಇಲ್ಲಿನ ಹೆಸ್ಕಾಂ ಸ್ಟೇಷನ್‌ನಲ್ಲಿ ಟಿಸಿ ದುರಸ್ತಿ ಘಟಕಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಟಿಸಿ ರಿಪೇರಿಗೋಸ್ಕರ ರೈತರು ವಿಜಯಪುರಕ್ಕೆ ಹೋಗುವ, 8-10 ದಿನ ಕಾಯುವ ಜಂಜಡ ಇನ್ನಿಲ್ಲ. ಒಂದೇ ದಿನದಲ್ಲಿ ಟಿಸಿ ರಿಪೇರಿ ಆಗುತ್ತದೆ. ರೈತರು ಸೋಲಾರ ಅಳವಡಿಸಿಕೊಳ್ಳಲು ಸರ್ಕಾರ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಬಜೆಟ್‌ನಲ್ಲಿ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಬಸವನ ಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಸಿದ್ದರಾಮ ಬಿರಾದಾರ ಮಾತನಾಡಿ, ಪ್ರತಿ ಮನೆಗೆ 1 ಕಿಲೋ ವ್ಯಾಟ್ ವಿದ್ಯುತ್ ಪಡೆಯಲು ಸೋಲಾರ್ ವ್ಯವಸ್ಥೆಗೆ 60 ಸಾವಿರ ತುಂಬಿದರೆ 30 ಸಾವಿರ ಸಬ್ಸಿಡಿ ಆಗಲಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಉಪಾದ್ಯಕ್ಷ ಲಕ್ಷ್ಮಣ ಲಮಾಣಿ, ಕಾಂಗ್ರೆಸ್ ಮುಖಂಡರಾದ ಸಿ.ಬಿ. ಅಸ್ಕಿ, ವೈ. ಎಚ್. ವಿಜಯಕರ, ಬಾಪುರಾವ ದೇಸಾಯಿ, ಪ್ರಭುರಾಜ ಕಲಬುರಗಿ, ಪಿಂಟು ಸಾಲಿಮನಿ, ಶರಣು ಸಜ್ಜನ, ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ, ಶಾಖಾಧಿಕಾರಿಗಳಾದ ಎಂ.ಎಸ್. ತೆಗ್ಗಿನಮಠ, ಬಿ.ಎಸ್. ಯಲಗೋಡ, ಎಸ್.ಎಂ. ಆರೆಶಂಕರ, ಅಯ್ಯನಗೌಡ ಬಿರಾದಾರ, ವಿದ್ಯುತ್ ಗುತ್ತಿಗೆದಾರ ಸಂಘದ ಪದಾಧಿಕಾರಿಗಳು, ಹೆಸ್ಕಾಂ ಸಿಬ್ಬಂದಿ ಇದ್ದರು.

ಮುದ್ದೇಬಿಹಾಳ ತಾಲೂಕಿಗೆ ಆರೇಳು ವರ್ಷಗಳ ಹಿಂದೆ ಕೃಷಿ ಸಂಶೋಧನಾ ಕೇಂದ್ರ ತಂದಿದ್ದೆ. ನಂತರದ ಚುನಾವಣೆಯಲ್ಲಿ ನಾನು ಸೋಲನುಭವಿಸಿದ್ದರಿಂದ ಅದನ್ನು ಕೈ ಬಿಟ್ಟರು. ಈಗ ಮತ್ತೇ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಇದಕ್ಕಾಗಿ 70 ಎಕರೆ ಜಮೀನಿನ ಹುಡುಕಾಟ ನಡೆದಿದೆ. ಈ ಬಾರಿ ಕೆಂದ್ರ ಆರಂಭವಾಗುತ್ತದೆ.

ಸಿ.ಎಸ್. ನಾಡಗೌಡ, ಶಾಸಕರು, ಮುದ್ದೇಬಿಹಾಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net