ರೈತರು ಹೊಸ ತಳಿ ಬೆಳೆಯಲಿ

7Nsg1
ಮುರ್ಕಿಬಾವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗೋ ಬೆಳೆ ಕ್ಷೇತ್ರೋತ್ಸವ ಹಾಗೂ ತರಬೇತಿ ಕಾರ್ಯಕ್ರಮವನ್ನು ಡಾ. ಆರ್.ಬಸವರಾಜಪ್ಪ ಉದ್ಘಾಟಿಸಿದರು. ಶಿವನಗೌಡ ಪಾಟೀಲ, ಎಸ್.ಬಿ.ಕೊಂಗವಾಡ. ಬಸವರಾಜ ದಳವಾಯಿ, ಡಾ.ಗುರುದತ್ತ ಹೆಗಡೆ, ಅಡಿವೆಪ್ಪ ಮೋದಗಿ ಇತರರಿದ್ದರು.
Published on

ನೇಸರಗಿ: ರೈತರು ಬೆಳೆದ ಬೆಳೆ ದ್ವಿಗುಣವಾಗಬೇಕಾದರೆ ನೂತನ ತಳಿ ಬೆಳೆಗಳನ್ನು ಬೆಳೆದು ಮಾದರಿಯಾಗಬೇಕು ಎಂದು ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ (ಕುಲಪತಿ) ಡಾ.ಆರ್.ಬಸವರಾಜಪ್ಪ ಹೇಳಿದರು.

ಸಮೀಪದ ಮುರ್ಕಿಬಾವಿ ಗ್ರಾಮದ ಸಿದ್ದಲಿಂಗಪ್ಪ ತಳವಾರ ಅವರ ಜಮೀನಿನಲ್ಲಿ ಧಾರವಾಡದ ಕೃಷಿ ವಿಶ್ವ ವಿದ್ಯಾಲಯ, ಅಖಿಲ ಭಾರತ ಸಮನ್ವಯ ಗೋ ಮತ್ತು ಬಾರ್ಲಿ ಅಭಿವೃದ್ಧಿ ಯೋಜನೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಡಿಬಿಡಬ್ಲು- 359 ಗೋ ಬೆಳೆ ಕ್ಷೇತ್ರೋತ್ಸವ ಹಾಗೂ ತರಬೇತಿ ಕಾರ್ಯ ಕ್ರಮದಲ್ಲಿ ಮಾತ ನಾಡಿದರು.

ಹರಿಯಾ ಣದ ಗೋ ಬೆಳೆ ಇದಾಗಿದೆ. ಜಿಲ್ಲೆಯ ರೈತರು ಬೆಳೆ ಬೆಳೆದು ಉತ್ತಮ ಇಳುವರಿ ಮಾಡಬೇಕು. ರೈತರು ಕೃಷಿ ಜತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಎರೆಹುಳು ಗೊಬ್ಬರ ಸೇರಿ ಮುಂತಾದ ಉಪ ಕಸಬು ಕೈಗೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಹಿರಿಯ ವಿಜ್ಞಾನಿ ಡಾ.ಗುರುದತ್ತ ಹೆಗಡೆ ಮಾತನಾಡಿ, ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಬೆಳೆ ಪಡೆಯಬೇಕು ಎಂದು ತಿಳಿಸಿದರು.

ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ಪಿ.ಎಸ್.ಮತ್ತಿವಾಡೆ, ಕೃಷಿ ಇಲಾಖೆ ಉಪನಿರ್ದೇಶಕ ಎಸ್.ಬಿ.ಕೊಂಗವಾಡ, ತಾಲೂಕು ಸಹಾಯಕ ನಿರ್ದೇಶಕ ಬಸವರಾಜ ದಳವಾಯಿ, ಕೃಷಿ ಅಕಾರಿ ರುದ್ರಪ್ಪ ಕುಂಬಾರ, ವಿದ್ಯಾಧರ ಹೊಸೂರ, ಡಾ.ಕುಮಾರ ಲಮಾಣಿ, ಗ್ರಾಪಂ ಸದಸ್ಯ ಅಡಿವೆಪ್ಪ ಮೋದಗಿ, ಶಿವಾನಂದ ಪಾಟೀಲ, ಎಂ.ಬಿ.ಯಲ್ಲಪ್ಪನವರ, ಡಾ.ಉದಯ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net