

ಗೋಕಾಕ: ಗ್ರಾಮೀಣ ಭಾಗದಲ್ಲಿ ರೈತರಿಗೆ ಪಿಕೆಪಿಎಸ್ ಸಹಕಾರಿಯಾಗಿದೆ. ಎಲ್ಲ ರೈತರಿಗೆ ಸರ್ಕಾರದ ಮಹತ್ವಾಕಾಂೆ ಯೋಜನೆ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಪಿಕೆಪಿಎಸ್ ಸದಸ್ಯರು ಪಾತೀತವಾಗಿ ಶ್ರಮಿಸಬೇಕು. ಅಂದಾಗ ಮಾತ್ರ ಸಂದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಕೌಜಲಗಿ ಪಿಕೆಪಿಎಸ್ ನೂತನ ಆಡಳಿತ ಮಂಡಳಿ ವತಿಯಿಂದ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೈತರಿಗೆ ಬಿಡಿಸಿಸಿ ಬ್ಯಾಂಕ್ ಹಾಗೂ ವಿವಿಧೆಡೆಯಿಂದ ದೊರೆಯುವ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಸಂದ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ, ಎಸ್.ಬಿ. ಲೋಕನ್ನವರ, ಅಧ್ಯ ವೆಂಕಟೇಶ ದಳವಾಯಿ, ಅರ್ಬನ್ ಬ್ಯಾಂಕ್ ಅಧ್ಯ ನಿಲೇಶ ಕೇವಟಿ, ಮಾಜಿ ಪಿಕೆಪಿಎಸ್ ಅಧ್ಯ ಮಹೇಶ ಪಟ್ಟಣಶೆಟ್ಟಿ, ಮಹಾಂತೇಶ ಶಿವನಮಾರಿ, ರಾಯಪ್ಪ ಬಳ್ಳೊಳದಾರ್, ಶಂಕರ ಜೋತಿನ್ನವರ, ಬಸವರಾಜ ಲೋಕನ್ನವರ, ಬಸು ಜೋಗಿ, ಕೀರಪ್ಪ ಪೂಜೆನ್ನವರ್, ಶ್ರೀಶೆಲ ಗಾಣಿಗೇರ, ಶಂಕರ ಚಚಡಿ, ಶಿವರಾಯಿ ಹಳ್ಳೂರ ಇತರರರಿದ್ದರು.