ಜೀವಜಲ ಉಳಿವಿಗೆ ಎಲ್ಲರೂ ಶ್ರಮವಹಿಸಲಿ

IMG-20240502-WA0391
Published on
  • ಹಾಸನ: ಸಕಲ ಜೀವ ರಾಶಿಗಳಿಗೆ ನೀರು ಅತ್ಯಮೂಲ್ಯವಾಗಿದ್ದು ಇದನ್ನು ಉಳಿಸಿಕೊಳ್ಳುವ ಕಾರ್ಯಕ್ಕೆ ಸಾರ್ವಜನಿಕರೆಲ್ಲರೂ ಕೈಜೋಡಿಸಬೇಕಿದೆ ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಹೇಳಿದರು.

  • ಅರಸೀಕೆರೆ ಗ್ರಾಮಾಂತರ ತಾಲೂಕಿನ ಸುಕ್ಷೇತ್ರ ಕೋಡಿಮಠದಲ್ಲಿ ರುದ್ರಾಕ್ಷ ಇಂಟರ್‌ನ್ಯಾಷನಲ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ನೀರು ಉಳಿಸಿ, ಜೀವ ಉಳಿಸಿ ಎಂಬ ಮನೆ ಮನೆಗೆ ನಾಮ ಫಲಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೀರು ಭಗವಂತನ ದೇಣಿಗೆಯಾಗಿದ್ದು, ದಿನ ಕಳೆದಂತೆ ನಾವು ನಮ್ಮ ಸುತ್ತಮುತ್ತಲಿನ ಪರಿಸರದ ಮೇಲೆ ಮಾಡುತ್ತಿರುವ ನಿರಂತರ ದಾಳಿಯಿಂದ ಮಳೆ ಕಡಿಮೆಯಾಗಲು ಪ್ರಾರಂಭಿಸಿದೆ.
  • ಗಿಡ, ಮರಗಳು ಕಡಿಮೆಯಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಎಲ್ಲರೂ ಪರಿಸರವನ್ನು ಪ್ರೀತಿಸುವ ಜತೆಗೆ ನೀರಿನ ಮಿತ ಬಳಕೆಗೆ ಒತ್ತು ನೀಡಬೇಕಿದೆ ಎಂದರು.

  • ಹೊಸ ಸಂವತ್ಸರ ಪ್ರಾರಂಭವಾದಂತೆ ಪ್ರಕೃತಿ ತನ್ನ ಕಾರ್ಯವನ್ನು ಎಲ್ಲೆಡೆ ಮಳೆ ಇಲ್ಲದಿದ್ದರೂ ಹಳೆಯ ಎಲೆಗಳು ಉದುರಿ ಹೊಸ ಚಿಗುರು ಮೂಡಿಸಿದೆ. ಆದರೆ ಪರಿಸರದ ಸೌಂದರ್ಯಕ್ಕೆ ನಾವು ಧಕ್ಕೆ ಬಾರದಂತೆ ನಡೆದುಕೊಂಡರೆ ಮಾತ್ರ ಈ ಭೂಮಿಯ ಮೇಲೆ ನಮ್ಮೆಲ್ಲರ ಉಳಿವು ಎಂದರು.

  • ರುದ್ರಾಕ್ಷ ಇಂಟರ್‌ನ್ಯಾಷನಲ್ ಫೌಂಡೇಷನ್ ಸಂಸ್ಥಾಪಕ ಜೈ ಪ್ರಕಾಶ್ ಗುರೂಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ನೀರಿನ ಹಾಹಾಕಾರ ಹೆಚ್ಚಿದ್ದು, ಇದರ ಬಳಕೆ ಮತ್ತು ಉಳಿಯುವಿಕೆ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ನಾವು ಮುಂದಾಗಿದ್ದು, ಎಲ್ಲರೂ ಸಹಕರಿಸುವಂತೆ ಕೋರಿದರು.
    ಈ ಸಂದರ್ಭದಲ್ಲಿ ಗಂಜಿಗೆರೆ ಚಂದ್ರಶೇಖರ್, ಬಿ. ಪರಮೇಶ್, ತೋಂಟೇಶ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net