ಪ್ರತಿಯೊಬ್ಬರೂ ಕಾನೂನು ಅರಿತುಕೊಳ್ಳಲಿ

23Rayabag2
Published on

ರಾಯಬಾಗ: ವ್ಯಕ್ತಿ ಹುಟ್ಟಿನಿಂದ ಸಾವಿನವರೆಗೂ ಕಾನೂನು ಅನ್ವಯವಾಗುತ್ತದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.

ತಾಲೂಕಿನ ಖೈರಕೊಡಿ ಗ್ರಾಮದ ಬಸವೇಶ್ವರ ನಗರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಕಾನೂನಿನ ಬಗ್ಗೆ ಅರಿತುಕೊಳ್ಳಬೇಕು ಎಂದರು.

ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, ತಹಸೀಲ್ದಾರ್ ಸುರೇಶ ಮುಂಜೆ, ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಸುಭಾಷ ನಾಯಿಕ, ತಾಲೂಕು ಅಧ್ಯಕ್ಷ ಬಾಬಾಸಾಹೇಬ ಖವಟಕೊಪ್ಪ, ಉಪಾಧ್ಯಕ್ಷ ಬಸವರಾಜ ಮಡಿವಾಳ, ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ, ಸಿಡಿಪಿಒ ಭಾರತಿ ಕಾಂಬಳೆ, ಎಪಿಪಿ ಹನುಮಂತ ಅಚಮಟ್ಟಿ, ಡಿ.ಎಚ್.ಯಲ್ಲಟ್ಟಿ, ಪಿ.ಎಸ್.ಕುರಬೇಟ, ಅಜಿತ ಕುಡಚೆ, ಮಲ್ಲಿಕಾರ್ಜುನ ಜೇಡರ, ರಾಜು ಮಡಿವಾಳ, ಪ್ರಕಾಶ ಮಾಳಿ, ಹನುಮಂತ ಭಜಂತ್ರಿ, ಕೃಷ್ಣಾ ಪೂಜಾರಿ, ಮಂಜುನಾಥ ವೇರ್ಣೇಕರ, ದತ್ತಾ ಭಜಂತ್ರಿ, ರಾಜು ಕಾಂಬಳೆ, ಲಕ್ಷ್ಮಣ ಕೊರೆ, ಭೀಮಣ್ಣ ಜಾಗನೂರೆ, ಗೈಬಿಸಾಬ ನದಾಫ, ಅಬ್ದುಲ್ ಡಾಂಗೆ, ರಮೇಶ ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net