

ಅಂಕಲಗಿ: ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ ಎಂದು ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಅಮರ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಮಾತನಾಡಿ, ಕಳೆದ 4 ದಿನಗಳಿಂದ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಮಾರ್ಗ ಮಧ್ಯದ ಗ್ರಾಮಗಳಲ್ಲಿ ವನ್ಯಜಿವಿ ಪರಿಸರ ಸಂರಣೆ ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಆಗ್ರಹಿಸಿ ಮಾನವ ಸರಪಳಿ ನಿರ್ಮಿಸಿ ಜನಜಾಗೃತಿ ಮೂಡಿಸುತ್ತಿರುವುದು ಶ್ಲಾನೀಯ ಎಂದರು. ಪಾದಯಾತ್ರೆ ಸಂಚಾಲಕರಾದ ಶಂಕರ ಗೊಡಗೇರಿ, ಈರಣ್ಣ ಮದವಾಲ, ಆನಂದ ಅತ್ತುಗೋಳ, ಸಿರಿಗೌಡ ನಿರ್ವಾಣಿ, ರಾಹುಲ ಪಾಟೀಲ, ಮಹೇಶ ನಿರ್ವಾಣಿ, ರಾಜು ತಿಳಗಂಜಿ, ಅಜೇಯ ಚೌಗಲಾ ಇತರರಿದ್ದರು.