ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಲಿ

11mjr1
Published on

ಮಾಂಜರಿ: ಹಸಿರಿದ್ದರೆ ಮಾತ್ರ ಉಸಿರು. ನಾವೆಲ್ಲ ಪರಿಸರ ಸಂರಕ್ಷಣೆಗೆ ಮುಂದಾದರೆ ಮಾತ್ರ ಜೀವ ಸಂಕುಲ ಉಳಿವು ಸಾಧ್ಯ ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಭರತೇಶ ಬನವಣೆ ಹೇಳಿದರು.

ಅವರು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಶುಕ್ರವಾರ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಅವರ 60ನೇ ಜನ್ಮದಿನ ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಆರ್.ಬಿ.ಖಂಡಗಾವೆ ಮಾತನಾಡಿ, ಸಸಿ ನೆಟ್ಟರೆ ಸಾಲದು, ಅವುಗಳನ್ನು ಬೆಳೆಸಿ ಹೆಮ್ಮರವಾಗಿಸುವ ಹೊಣೆಗಾರಿಕೆಯೂ ನಮ್ಮದಾಗಿದೆ. ನಾವೆಲ್ಲ ಪರಿಸರ ವದ್ಧಿಗೆ ಮುಂದಾಗಬೇಕು ಎಂದರು.

ಸುರೇಶ ಪಾಟೀಲ್, ಅಜಿತ್ ಉಮರಾಣಿ, ಅನಿಲ್ ಪಾಟೀಲ್, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವದ್ಧಿ ಅಧಿಕಾರಿ ಎನ್.ಎಸ್.ಹಿರೇಮಠ ಹಾಗೂ ಮಲ್ಲಿಕಾರ್ಜುನ ಕೋರೆ ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮಕ್ಕೆ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ್ ಕಾಟೆ, ನಿರ್ದೇಶಕ ಅಜಿತ್ ದೇಸಾಯಿ, ಚೇತನ್ ಪಾಟೀಲ್, ಸಂದೀಪ್ ಪಾಟೀಲ್, ಅಣ್ಣಾಸಾಹೇಬ್ ಇಂಗಳೆ, ಭರಮಗೌಡ ಪಾಟೀಲ್, ನಂದುಕುಮಾರ್ ನಾಶಿಪುಡಿ, ಮಹಾವೀರ ಕಾತ್ರಾಳೆ, ವಿವೇಕ ಕಮತೆ, ಸಂಜಯ್ ಚೌಧರಿ, ನಾಗೇಶ್ ಧರನಾಯಿಕ, ಪ್ರಭಾಕರ ಶಿಂಧೆೆ ವಿಕಾಸ್ ಪಾಟೀಲ್, ಸುರೇಶ್ ವಡ್ಡರ್, ತಮ್ಮಣಿ ಗುಂಡುಕಲೆ, ಕಲ್ಲಪ್ಪ ಗುಂಡಕಲೆ, ಅನಿಲ್ ಮನೆ, ರಾಹುಲ್ ಇಚಲಕರಂಜೆ, ಎನ್. ಎಂ.ಮುಜುಕರ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಬಿ.ಆರ್.ಪಾಟೀಲ್, ಶಿವಶಕ್ತಿ ಶುಗರ್ಸ್‌ ಸಕ್ಕರೆ ಕಾರ್ಖಾನೆ ಅಧಿಕಾರಿಗಳಾದ ಬಿ.ಎ.ಪಾಟೀಲ್, ವಿಜಯ ಪಾಟೀಲ್, ಸಂಜಯ್ ಯಾದವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net