ಪ್ರತಿಯೊಬ್ಬರೂ ಹೃದಯದ ಕಾಳಜಿ ವಹಿಸಲಿ

SDP BIRUDU
Published on

ಸಿದ್ದಾಪುರ: ಹೃದಯದ ಕಾಳಜಿ ಎಲ್ಲರೂ ಮಾಡಿಕೊಳ್ಳಬೇಕು. ಕೊಡುವ ಔಷಧದಷ್ಟೇ ರೋಗಿಯ ಆತ್ಮಸ್ಥೈರ್ಯ ಕೂಡ ಮುಖ್ಯ ಎಂದು ಮಂಗಳೂರಿನ ಒಮೇಗಾ ಆಸ್ಪತ್ರೆಯ ಪ್ರಸಿದ್ಧ ಹೃದ್ರೋಗ ತಜ್ಞ ಡಾ.ಮುಕುಂದ ಕುಂಬ್ಳೆ ಹೇಳಿದರು.

ತಾಲೂಕಿನ ಇಟಗಿ ಸಮೀಪದ ಕಲಗದ್ದೆಯ ನಾಟ್ಯವಿನಾಯಕ, ಲಲಿತಾ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ದೇವಸ್ಥಾನ ವತಿಯಿಂದ ನೀಡಲಾದ ‘ಹೃದ್ರೋಗ ಚಿಕಿತ್ಸಾ ಧುರಂಧರ’ ಬಿರುದು ಸ್ವೀಕರಿಸಿ ಅವರು ಮಾತನಾಡಿದರು.

ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ದೇವರು ಮಾನಸಿಕ ನೆಮ್ಮದಿ ನೀಡಿದರೆ ವೈದ್ಯರು ಆರೋಗ್ಯ ನೆಮ್ಮದಿ ಕೊಡುತ್ತಾರೆ ಎಂದರು.

ದೇವಾಲಯದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಅಧ್ಯಕ್ಷತೆ ವಹಿಸಿದ್ದರು. ಪುರೋಹಿತರಾದ ಅಡವಿತೋಟ ಕೃಷಣ ಭಟ್ಟ ಉಪಸ್ಥಿತರಿದ್ದರು. ವಿ.ಎಂ. ಭಟ್ಟ ಶಿರಸಿ ಕಾರ್ಯಕ್ರಮ ನಿರ್ವಹಿಸಿದರು.

ಇದಕ್ಕೂ ಪೂರ್ವದಲ್ಲಿ ಸಂಕಷ್ಟಿ ಪ್ರಯುಕ್ತ ಇಷ್ಟಾರ್ಥ ಸಿದ್ಧಿಗಾಗಿ ಮಹಾಗಣಪತಿಗೆ ಲಕ್ಷ ಪುಷ್ಪಾರ್ಚನೆ, ನೂರೆಂಟು ಕುಂಭ ಕ್ಷೀರಾಭಿಷೇಕ, ವಿಶೇಷ ಪೂಜೆ, ಹವನ, ರಥೋತ್ಸವ, ಅನ್ನ ಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net