

ಸರಗೂರು: ಆರೋಗ್ಯ ಉಚಿತ ತಪಾಸಣಾ ಶಿಬಿರದಿಂದ ಬಡಜನರ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಎಸ್‌ವಿವೈಎಂ ಸಂಸ್ಥೆ ಉತ್ತಮ ಅವಕಾಶ ಮಾಡಿದೆ ಎಂದು ಜೆಎಸ್‌ಎಸ್ ವಿದ್ಯಾ ಸಂಸ್ಥೆಗಳ ಹಾಗೂ ಮೃತ್ಯುಂಜಯಪ್ಪ ಟ್ರಸ್ಟ್ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ ಹೇಳಿದರು.
ಪಟ್ಟಣದ ವಿವೇಕಾನಂದರ ಯೂತ್ ಮೂವ್‌ಮೆಂಟ್ ಆಸ್ಪತ್ರೆ ಆವರಣದಲ್ಲಿ ವಿವೇಕಾನಂದ ಸ್ಮಾರಕ ಆಸ್ಪತ್ರೆ ಮತ್ತು ವರ್ತಕ ಮಂಡಳಿ ಸರಗೂರು, ಲಯನ್ಸ್ ಕ್ಲಬ್ ಆಫ್ ಸರಗೂರು, ನೋಟರಿ ಕ್ಲಬ್ ಎಚ್.ಡಿ.ಕೋಟೆ, ಜೈನ್ ಮಿಲನ್ ಸರಗೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಶನಿವಾರ ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಆರೋಗ್ಯ ತಪಾಸಣೆ ಕಾರ್ಯಕ್ರಮಗಳ ಪ್ರಯೋಜನ ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
ಅಧುನಿಕ ಜೀವನಶೈಲಿ, ಆಹಾರ ಪದ್ಧತಿ ಹಲವು ರೋಗಗಳಿಗೆ ಕಾರಣವಾಗುತ್ತಿದೆ. ದುಶ್ಚಟಗಳಿಂದ ದೂರವಿದ್ದು, ಆರೋಗ್ಯ ತಪಾಸಣೆಯಿಂದ ಆರೋಗ್ಯಮಯ ಜೀವನ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ಈ ರೀತಿ ಶಿಬಿರವನ್ನು ವಿವೇಕಾನಂದ ಸ್ಮಾರಕ ಆಸ್ಪತ್ರೆ ಆಯೋಜಿಸಿರುವುದು ಒಳ್ಳೆಯದು ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ನಾವು ಆರೋಗ್ಯ ಲೆಕ್ಕಿಸದೆ ದುಡಿಯುತ್ತೇವೆ. ಆದರೆ ಅರೋಗ್ಯ ಕೈಕೊಟ್ಟಾಗ ಆಸ್ಪತ್ರೆಗೆ ನಾವು ದುಡಿದ ಹಣ ಸುರಿಯುತ್ತೇವೆ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತದಂತಹ ರೋಗಗಳು ಹೆಚ್ಚುತ್ತಿವೆ. ಆರೋಗ್ಯದತ್ತ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದರು.
ಬೀಚನಹಳ್ಳಿ ಗ್ರಾಪಂ ಸದಸ್ಯ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಭಾಸ್ಕರ ಕಬಿನಿ ಮಾತನಾಡಿ, ಒಬ್ಬ ವ್ಯಕ್ತಿಗೆ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಯಾವುದೂ ಇಲ್ಲ. ವಿವಿಧ ಕಾರಣಗಳಿಗಾಗಿ ಮನುಷ್ಯ ತಂಬಾಕು ಸೇರಿದಂತೆ ಮಾದಕವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾನೆ. ಮಾದಕ ವಸ್ತುಗಳ ಸೇವನೆಯು ಕೇವಲ ಜೀವನ ನಷ್ಟವಲ್ಲದೇ ಆರ್ಥಿಕ ನಷ್ಟ ಉಂಟು ಮಾಡುತ್ತದೆ ಎಂದರು.
ಸಂಸ್ಥೆ ಉಪ ನಿರ್ದೇಶಕರು ಡಾ.ಶಂಕರ್, ವರ್ತಕರ ಮಂಡಳಿ ಕಾರ್ಯದರ್ಶಿ ವೆಂಕಟೇಶ್, ಜೈನ್ ಮಿಲನ್ ನಿರ್ದೇಶಕ ಎಸ್.ಎಸ್.ಸೋಮಪ್ರಭಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವಿ.ಭಾಸ್ಕರ್, ರಾಜಸ್ಥಾನ್ ಸಂಘ ಅಧ್ಯಕ್ಷ ಡಕ್ಲರಾಮ್, ರೋಟರಿ ಕ್ಲಬ್ ಅಧ್ಯಕ್ಷ ಎನ್.ಧರ್ಮೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಬಿ.ನಾಗರಾಜು, ನೋಟರಿ ಕ್ಲಬ್ ಸತೀಶ್, ಆಸ್ಪತ್ರೆ ಉಪ ವ್ಯವಸ್ಥಾಪಕ ಬಿ.ಜಿ.ಸಂಧ್ಯಾ, ಅಪ್ರೋಲ್ ಪಾಷಾ, ಎಂ ಪಿ ರಮೇಶ್, ಸುಧಾರಾಣಿ, ಮಮತಾ, ಶ್ರೀಕಾಂತ್, ಬಂಗಾರ ಶೆಟ್ಟಿ, ಗೋಪಾಲಕೃಷ್ಣ, ರೂಪೇಶ್, ವೆಂಕಟೇಶಸ್ವಾಮಿ, ಸತೀಶ್,ಡಾ.ಮನೋಹರ್ ಇತರರು ಇದ್ದರು.