

ಹೊಸಪೇಟೆ: ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಹೇಳಿದರು.
ಇದನ್ನೂ ಓದಿ:ಬನ್ನೂರಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ
ತಾಲೂಕಿನ ಶಾದಿಮಹಲ್ ಆವರಣದಲ್ಲಿ ಅಂಜುಮನ್ ಖಿದ್ಮತೆ ಇ ಇಸ್ಲಾಂ ಕಮಿಟಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮೂತ್ರಪಿಂಡ, ಹೃದಯರೋಗ, ನರರೋಗ, ಕ್ಯಾನ್ಸರ್ ಹಾಗೂ ಇತರೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯದ ಮಹತ್ವ ಅರಿಯದೆ ನಿರ್ಲಕ್ಷೃ ಮಾಡಿದರೆ ಮರಳಿ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿಲ್ಲ. ಶಿಬಿರದ ನಂತರ ಹೆಚ್ಚಿನ ಚಿಕಿತ್ಸೆಗೆ ಬಿಪಿಎಲ್ ಕಾರ್ಡ್, ಆರೋಗ್ಯ ಕಾರ್ಡ್, ಯಶಸ್ವಿನಿ ಕಾರ್ಡ್ ಇದ್ದಲ್ಲಿ ಬೆಂಗಳೂರಿನಲ್ಲಿ ತಪಾಸಣೆ ಮಾಡಲಾಗುವುದು. ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಅಂಜುಮನ್ ಕಮಿಟಿ ಪದಾಧಿಕಾರಿಗಳಾದ ಎಂ.ಫೈರೋಜ್ ಖಾನ್, ಅಬ್ದುಲ್ ಖಾದರ್ ರಫಾಯಿ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವೈದ್ಯರಾದ ಶುಭೋದಯ, ಶ್ರೀಯಾ ಗೊಲ್ಲಮೊವಿ, ಮೊಹಮ್ಮದ್ ಜುನೆದ್, ಪ್ರತೀಕ್ ಇತರರಿದ್ದರು.