

ಹನಗೋಡು: ಪ್ರತಿಯೊಬ್ಬರೂ 40 ವರ್ಷ ತುಂಬಿದ ನಂತರ ಕಡ್ಡಾಯವಾಗಿ ಬಿಪಿ, ಶುಗರ್, ನೇತ್ರ ಪರೀಕ್ಷೆ ಸೇರಿದಂತೆ ಇನ್ನಿತರ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಡಾ.ಜೋಗೇಂದ್ರನಾಥ್ ಸಲಹೆ ನೀಡಿದರು.
ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹುಣಸೂರಿನ ಸತ್ಯ ಎಂ.ಎ.ಎಸ್ ಫೌಂಡೇಶನ್ ಹಾಗೂ
ಮೈಸೂರು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಜಿಲ್ಲಾ ನೇತ್ರ ಸಂಚಾರಿ ನಿಯಂತ್ರಣ ಘಟಕ, ಕೆ.ಆರ್.ಆಸ್ಪತ್ರೆ, ತಾಲೂಕು ಆರೋಗ್ಯ ಅಧಿಕಾರಿಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ನೇತ್ರ ಉಚಿತ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತ ನಾಡಿದರು. 40 ವರ್ಷದ ನಂತರ ಎಲ್ಲರೂ ನೇತ್ರ, ಮಧುಮೇಹ, ರಕ್ತದೊತ್ತಡ ಬಗ್ಗೆ ಕನಿಷ್ಠ 6 ತಿಂಗಳಿ ಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಿತ್ಯ ವ್ಯಾಯಮ, ಹಸಿರು ತರಕಾರಿ, ಮಿತ ಆಹಾರ, ಶುದ್ಧ ನೀರು ಸೇವನೆ ಮಾಡಬೇಕು ಎಂದರು. ಸತ್ಯ ಎಂ.ಎ.ಎಸ್ ಫೌಂಡೇಶನ್ ಹಲವಾರು ವರ್ಷಗಳಿಂದ ತಾಲೂಕಿನಾದ್ಯಂತ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಿ ಉತ್ತಮ ಸೇವಾಕಾರ್ಯ ನಡೆಸು ತ್ತಿದೆ. ಸಾರ್ವಜನಿಕರು ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿ ಕೊಳ್ಳ ಬೇಕು ಎಂದು ತಿಳಿಸಿದರು.
ಶಿಬಿರ ಉದ್ಘಾಟಿಸಿದ ಸಮಾಜ ಸೇವಕ ಸತ್ಯಪ್ಪ ಮಾತನಾಡಿ, ನೇತ್ರ ತಪಾಸಣಾ ಶಿಬಿರವನ್ನು ಈ ಬಾರಿ ಹನಗೋಡಿನಲ್ಲಿ ಆಯೋಜಿಸಿದ್ದು, ಸುಮಾರು 20 ಜನರನ್ನು ಶಸ್ತ್ರಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸ ಲಾಯಿತು. 60 ಜನ ಕಣ್ಣು ತಪಾಸಣೆ ಮಾಡಿಸಿ ಕೊಂಡರು. ಹಲವರಿಗೆ ಶುಗರ್, ಬಿ.ಪಿ ಇರುವುದು ಪತ್ತೆಯಾಯಿತು. ಹೀಗಾಗಿ 40 ವರ್ಷ ದಾಟಿದ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳ ಬೇಕೆಂದು ಮನವಿ ಮಾಡಿದರು. ಕೆ.ಆರ್.ಆಸ್ಪತ್ರೆಯ ಜಿಲ್ಲಾ ನೇತ್ರ ಸಂಚಾರಿ ನಿಯಂತ್ರಣ ಘಟಕದ ನೇತ್ರ ಪರೀಕ್ಷಕ ಮಂಜುನಾಥ್, ಹುಣಸೂರಿನ ನೇತ್ರ ಪರೀಕ್ಷಕ ಸಂಜಯ್, ಆರೋಗ್ಯ ಸಹಾಯಕಿ ಡಿ.ಎಂ.ಸುಶೀಲಾ, ಹೆಲ್ತ್ ಇನ್ಸ್‌ಪೆಕ್ಟರ್ ಪ್ರಭಾಕರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮರಿಲಿಂಗೇಗೌಡ, ಸಂಚಾಲಕ ಪ್ರಕಾಶ್, ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.