ಸ್ವಚ್ಛತೆಗೆ ಪ್ರತಿಯೊಬ್ಬರೂ ಶ್ರಮಿಸಲಿ

Let everyone strive for cleanliness
ಹೊನ್ನುಟಗಿಯ ಪ್ರಾರ್ಥನಾ ಇಂಟರ್​ ನ್ಯಾಷನಲ್​ ಸ್ಕೂಲ್​ ವಿದ್ಯಾರ್ಥಿಗಳು ದೇವರ ಹಿಪ್ಪರಗಿ ಪಟ್ಟಣದ ಬಸ್​ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು.
Published on

ವಿಜಯಪುರ: ತಾಲೂಕಿನ ಹೊನ್ನುಟಗಿ ಗ್ರಾಮದ ಪ್ರಾರ್ಥನಾ ಇಂಟರ್​ ನ್ಯಾಷನಲ್​ ಸ್ಕೂಲ್​ ವತಿಯಿಂದ ಗಾಂಧಿ ಜಯಂತಿ ಹಿನ್ನೆಲೆ ಬುಧವಾರ ದೇವರಹಿಪ್ಪರಗಿ ಪಟ್ಟಣದ ವಿಜಯಪುರ&ಸಿಂದಗಿ ಬೈ ಪಾಸ್​, ಪೊಲೀಸ್​ ಠಾಣೆ, ಅಂಬೇಡ್ಕರ್​ ವೃತ್ತ, ವಿವಿಧ ಕಡೆಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಪ್ರಾಚಾರ್ಯ ನವೀನ ಜಾರ್ಜ್​ ಮಾತನಾಡಿ, ದೇಶವನ್ನು ಎಲ್ಲ ರೀತಿಯಲ್ಲಿ ಸ್ವಚ್ಛವಾಗಿಡಲು ಅತ್ಯಂತ ಕಳಕಳಿ ಹೊಂದಿದ್ದ ಮಹಾತ್ಮ ಗಾಂಧೀಜಿಯವರು ಸ್ವಚ್ಛ ಭಾರತದ ಕನಸನ್ನು ಕಂಡಿದ್ದರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ನೆರೆ&ಹೊರೆಯ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಗಾಂಧೀಜಿಯವರ ಕನಸನ್ನು ನನಸು ಮಾಡಲು ಶ್ರಮಿಸಬೇಕು. ಸ್ವಚ್ಛ ಭಾರತ ಅಭಿಯಾನ ಎನ್ನುವುದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿತ್ಯ ಜೀವನದಲ್ಲಿ ನಿರಂತರವಾಗಿದ್ದರೇ ಸಮೃದ್ಧ ಆರೋಗ್ಯ ನಮ್ಮದಾಗಲಿದೆ ಎಂದು ಹೇಳಿದರು.

ಶಿಕ್ಷಕಿ ಶಿಲ್ಪಾ ಪಾಟೀಲ, ಪ್ರೀತಿ, ಅಪೂರ್ವ, ಅರ್ಜುನ, ರೇವತಿ, ನಿಂಗಮ್ಮ, ರೋಹಿತ, ಮುಕುಂದ, ವಿದ್ಯಾರ್ಥಿಗಳು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net