ಸರ್ವರೂ ಕಾನೂನು ಗೌರವಿಸಲಿ

27 ALVANDI 05
ಅಳವಂಡಿ ಸಮೀಪದ ಕವಲೂರು ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರೆ, ಶ್ರೀ ಉಜ್ಜಿನಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಪಿಎಸ್‌ಐ ಪ್ರಹ್ಲಾದ ನಾಯಕ ಮಾತನಾಡಿದರು. ಪ್ರಮುಖರಾದ ಮಹಾಂತೇಶ , ಹನುಮಂತ , ಹೊನ್ನಕೆರಪ್ಪ, ತಿಮ್ಮಣ್ಣ, ಮುತ್ತಣ್ಣ, ಯಂಕಪ್ಪ, ಮಲ್ಲೇಶಪ್ಪ ಇತರರು ಇದ್ದರು.
Published on

ಅಳವಂಡಿ: ಜಾತ್ರೆ, ಹಬ್ಬಹರಿದಿನ, ಧಾರ್ಮಿಕ ಕಾರ್ಯಕ್ರಮಗಳು ಜನರ ಮನಸ್ಸನ್ನು ಉಲ್ಲಾಸದಿಂದ ಇರಿಸಲು ಹಾಗೂ ಒಗ್ಗಟ್ಟಿನಿಂದ ಇರಲು ನೆರವಾಗುತ್ತವೆ ಎಂದು ಪಿಎಸ್‌ಐ ಪ್ರಹ್ಲಾದ ನಾಯಕ ತಿಳಿಸಿದರು.

ಸಮೀಪದ ಕವಲೂರು ಗ್ರಾಮದಲ್ಲಿ ಮೇನಲ್ಲಿ ನಡೆಯುವ ಶ್ರೀ ದುರ್ಗಾದೇವಿ ಜಾತ್ರೆ, ಶ್ರೀ ಉಜ್ಜಿನಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಶಾಂತಿ ಸಭೆ ಉದ್ದೇಶಿಸಿ ಭಾನುವಾರ ಮಾತನಾಡಿದರು. ಸಾರ್ವಜನಿಕರು ಸೌಹಾರ್ದತೆ, ಶಾಂತಿಯಿಂದ ಹಬ್ಬಗಳನ್ನು ಆಚರಿಸಬೇಕು.

ಯಾವದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಸರ್ವರೂ ಕಾನೂನನ್ನು ಗೌರವಿಸಬೇಕು ಎಂದರು. ಪ್ರಮುಖರಾದ ತಿಮ್ಮಣ್ಣ ಸಿದ್ನೇ ಕೊಪ್ಪ,ಯಂಕಪ್ಪ ಹಳ್ಳಿ, ಶರಣಪ್ಪ ಯರಾಶಿ, ನಾಗರಾಜ ಹಕ್ಕಂಡಿ, ಶಿವಪ್ಪ ಮುಕ್ಕಣ್ಣವರ, ಎಚ್‌ಸಿ ಮಲ್ಲೇಶಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net