

ಮಲ್ಲಮ್ಮನ ಬೆಳವಡಿ: ಸಮಾಜ ಜಾಗೃತಗೊಳಿಸುವ ಮಹಾತ್ಮರ ಜಾತ್ರೆ&ಉತ್ಸವಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಗ್ರಾಮದಲ್ಲಿ ಯುಗಾದಿ ಪಾಡ್ಯಯಂದು ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಲಕ್ಕಮ್ಮದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು. ಗಂಗಾಧರಯ್ಯಸ್ವಾಮಿ ವಿರಕ್ತಮಠ ಮಾತನಾಡಿದರು.
ಪರಸ್ಪರ ಭಂಡಾರ ಎರಚಿ ಭಕ್ತರು ಸಂಭ್ರಮಿಸಿದರು. ಸಂಜೆ ಕೆಂಡ ಹಾಯ್ದು ಭಕ್ತರು ಸೇವೆ ಸಲ್ಲಿಸಿದರು. ಗ್ರಾಪಂ ಅಧ್ಯ ಚಂದ್ರಶೇಖರ ಕಾರಿಮನಿ, ಪ್ರಾಚಾರ್ಯ ಮಹಾಂತೇಶ ಉಪ್ಪಿನ, ಪ್ರಕಾಶ ಬಳಿಗಾರ, ಮಹೇಶ ಕಾರಿಮನಿ, ಹನುಮಂತ ಸಾಲಹಳ್ಳಿ, ವಿಶ್ವನಾಥ ಪೂಜೇರ, ಪತ್ರಕರ್ತ ಯಾಸಿನ ಕಿತ್ತೂರು, ಮುತ್ತು ಮತ್ತಿಕೊಪ್ಪ, ಪ್ರಕಾಶ ಹುಂಬಿ, ಯಲ್ಲಪ್ಪ ಬಾರ್ಕಿ, ಬಾಲಪ್ಪ ದೊಡ್ಡಮನಿ, ಈರಪ್ಪ ನಂದಿ, ಅಣ್ಣಪ್ಪ್ಪ ಬೆಳ್ಳಿಕಟ್ಟಿ, ಯಲ್ಲಣ್ಣ ವಡ್ಡರ ಇತರರಿದ್ದರು. ಬಾಬು ಖಂಡೋಜಿ ನಿರೂಪಿಸಿದರು. ವೀರೇಶ ಎಕ್ಕೆರಿ ವಂದಿಸಿದರು.