ಎಲ್ಲರೂ ಹಕ್ಕು-ಕರ್ತವ್ಯಗಳನ್ನು ಪಾಲಿಸಲಿ

25 KHP 01
ಕಾನಹೊಸಹಳ್ಳಿ ಕರೇಕಲ್‌ನಲ್ಲಿ ಹಮ್ಮಿಕೊಂಡಿದ್ದ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಪ್ರೇಮಾ-ತಿಪ್ಪೇಸ್ವಾಮಿ ದಂಪತಿಗೆ ಡಾ.ಬಿ.ಆರ್.ಅಂಬೆಡ್ಕರ್ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಯನ್ನು ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಶರಣಪ್ಪ ಬಲ್ಲಟಗಿ ನೀಡಿದರು. ಡಾ.ಕರಿಬಸಪ್ಪ, ಡಾ.ಓಂಕಾರಪ್ಪ, ಗಂಗಣ್ಣ, ದುರುಗೇಶ್ ಪೂಜಾರಹಳ್ಳಿ ಇತರರಿದ್ದರು.
Published on

ಕಾನಹೊಸಹಳ್ಳಿ: ದೇಶದಲ್ಲಿ ಎಲ್ಲ ವರ್ಗದವರಿಗೂ ನ್ಯಾಯ ದೊರಕಿಸಲು ಸಂವಿಧಾನ ರಚಿಸಿದ ಧೀಮಂತ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಶಿಕ್ಷಕ ಡಾ.ಎ.ಕರಿಬಸಪ್ಪ ಹೇಳಿದರು.

ಕಾನಹೊಸಹಳ್ಳಿ ಕರೇಕಲ್‌ನಲ್ಲಿ ಪ್ರೇಮಾ- ತಿಪ್ಪೇಸ್ವಾಮಿ ದಂಪತಿ ಸೋಮವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಡ್ಡುಗಟ್ಟಿದ ಸಮಾಜದಲ್ಲಿ ಬೇರೂರಿದ್ದ ಅಸಮಾನತೆ ವಿರುದ್ಧ ಬುದ್ಧ, ಬಸವ ಅವರಂತೆ ಅಂಬೇಡ್ಕರ್ ಹೋರಾಡಿದರು. ಭ್ರಾತೃತ್ವ, ಜಾತ್ಯತೀತ ನೆಲೆಯ ಆಶಯದೊಂದಿಗೆ ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದಾರೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ, ದಸಂಸ ತಾಲೂಕು ಸಂಚಾಲಕ ಎಳನೀರು ಗಂಗಣ್ಣ, ಶಿಕ್ಷಕ ಕೆಂಚಮಲ್ಲನಹಳ್ಳಿ ಮಹಾಂತೇಶ, ಪ್ರಮುಖರಾದ ಶರಣಪ್ಪ ಬಲ್ಲಟಗಿ, ನೀರಗಂಟಿ ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯ ಪೀತಾಂಬರ್, ಯಮುನಪ್ಪ, ವೆಂಕಟೇಶ್, ಕೆಂಚಮಲ್ಲನಹಳ್ಳಿ ಶಂಕ್ರಪ್ಪ, ಎಚ್.ಹೇಮಂತ್, ನಡುವಲಮನೆ ನಾಗರಾಜ, ರಜನಿಕಾಂತ್, ನೀರಗಂಟಿ ಸುರೇಶ, ಟಿ.ಬಸವರಾಜ, ಜಿ.ನಾಗರಾಜ, ಎಂ.ಅಜ್ಜಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net