

ಸಾಲಿಗ್ರಾಮ: ಅಮೂಲ್ಯ ಜೀವ ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಬೇಕು. ಪರವಾನಗಿ ಇಲ್ಲದೆ ವಾಹನ ಚಲಾಯಿಸಬಾರದು ಎಂದು ಸಾಲಿಗ್ರಾಮ ಸಬ್‌ಇನ್‌ಸ್ಪ್ಪೆಕ್ಟರ್ ಮಹೇಂದ್ರ ಹೇಳಿದರು.
ತಾಲೂಕು ವಾಲ್ಮೀಕಿ ಸಂಘದಿಂದ ಇತ್ತೀಚೆಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಇದರಿಂದ ಸಾವು, ನೋವುಗಳು ಹೆಚ್ಚಾಗುತ್ತಿದೆ. ನಿಯಮಪಾಲನೆಯಿಂದ ಇದನ್ನು ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು.
18ವರ್ಷ ತುಂಬದವರಿಗೆ ವಾಹನ ಚಲಾಯಿಸಲು ಅವಕಾಶ ಕಲ್ಪಿಸಬಾರದು. ವಾಹನ ಚಲಾಯಿಸುವ ಸಂದರ್ಭ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿರಬೇಕು ಎಂದು ನಿರ್ದೇಶನ ನೀಡಿದರು.
ಸಂಘದ ಅಧ್ಯಕ್ಷ ಮಹದೇವ್ ಮಾತನಾಡಿದರು. ವಾಲ್ಮೀಕಿ ಸಂಘದ ತಾಲೂಕು ಉಪಾಧ್ಯಕ್ಷ ತಂದ್ರೆ ವೆಂಕಟೇಶ್ ನಾಯಕ, ರಾಮನಾಯಕ, ಚಂದ್ರನಾಯಕ, ಗೋಬಿಶಂಕರ್, ಮಲ್ಲಿಕಾರ್ಜುನ್, ದಿನೇಶ್, ಕೃಷ್ಣನಾಯಕ, ಬಿಜೇಶ್, ಕೃಷ್ಣಪ್ಪ, ನಟರಾಜ್, ಮಿರ್ಲೆವೆಂಕಟೇಶ್, ಲಕ್ಷ್ಮಣನಾಯಕ, ಮಂಜುನಾಥ್, ಕುಮಾರ್, ಸಂತೋಷ್, ಶಿವಕುಮಾರ್, ಮಹದೇವನಾಯಕ, ರಾಮನಾಯಕ, ಎಎಸ್‌ಐ ಕುಮಾರ್, ಕಾಳಮ್ಮನಕೊಪ್ಪಲು ರಾಘು, ಮಂಜುನಾಥ್, ಪ್ರವೀಣ್ ಇತರರಿದ್ದರು.