ಕನ್ನಡ ಭಾಷಾಭಿಮಾನ ಎಲ್ಲರಲ್ಲೂ ಇರಲಿ

12 HKR 6
Published on

ಹಿರೇಕೆರೂರ: ರಾಜ್ಯದಲ್ಲಿ ಎಲ್ಲ ಧರ್ಮ, ಭಾಷೆೆ, ಸಮುದಾಯದವರು ವಾಸಿಸುತ್ತಿದ್ದಾರೆ. ಎಲ್ಲರಲ್ಲೂ ಕನ್ನಡ ಭಾಷಾಭಿಮಾನ ಇರಬೇಕು. ಸುದೀರ್ಘ ಇತಿಹಾಸ ಹೊಂದಿದ ಕನ್ನಡ ಭಾಷೆ, ಸಾಹಿತ್ಯ ಕ್ಷೇತ್ರದ ಬಗ್ಗೆ ಎಲ್ಲರೂ ತಿಳಿದುಕೊಂಡು ಈ ಕ್ಷೇತ್ರವನ್ನು ಉಳಿಸಿ ಬೆಳೆಸಲು ಸನ್ನದ್ಧರಾಗಬೇಕು ಎಂದು ಚಿಕ್ಕೇರೂರ ಗ್ರಾಪಂ ಅಧ್ಯಕ್ಷೆ ಸಲ್ಮಾ ಅಜರುದ್ದೀನ್ ಹಂಸಭಾವಿ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಮುರಾರ್ಜಿ ದೇಸಾಯಿ ವಸತಿ ಶಾಲೆ ಚಿಕ್ಕೇರೂರ ಇವರ ಸಹಯೋಗದಲ್ಲಿ ಶ್ರಾವಣ ಸಂಜೆಯ ನಾಲ್ಕನೇ ಸಾಹಿತ್ಯ ಗೋಷ್ಠಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಗೋಷ್ಠಿಯಲ್ಲಿ ಶರಣರ ಚಳವಳಿ ಹಾಗೂ ಸಾಮಾಜಿಕ ನ್ಯಾಯದ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಡಾ. ಮಂಜುನಾಥ ಸುಳಗನ್ನಿ, 12ನೇ ಶತಮಾನದಲ್ಲಿ ಶಿವಶರಣರು ಬಸವಣ್ಣನವರ ನೇತೃತ್ವದಲ್ಲಿ ಸಮಾಜದಲ್ಲಿರುವ ಜಾತಿ ಪದ್ಧತಿ, ಅಸಮಾನತೆ ಅಸ್ಪಶ್ಯತೆ ತೊಲಗಿಸಲು ಪ್ರಯತ್ನಿಸಿದರು. ನಾವು ಕೂಡ ಸಮಾಜದಲ್ಲಿರುವ ಮೂಢನಂಬಿಕೆಗಳಂಥ ಅನಿಷ್ಟ ಪದ್ಧತಿಗಳನ್ನು ತೊಲಗಿಸಲು ಪ್ರಯತ್ನಿಸೋಣ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಎನ್. ಸುರೇಶಕುಮಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಸದಾನಂದ ಕೋಡಿಹಳ್ಳಿ, ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಬಿ. ಕಾಗಿನೆಲ್ಲಿ, ಬಿ.ಐ. ಲಕ್ಕಪ್ಪಳವರ, ಗೌರವ ಕಾರ್ಯದರ್ಶಿ ಪಿ.ಎಸ್. ಸಾಲಿ, ಎಂ.ಎಂ. ಮತ್ತೂರ, ಸಿ.ಎಸ್. ಚಳಗೇರಿ, ಜೆ.ಬಿ. ಮರಿಗೌಡ್ರ, ಬಿ.ವಿ. ಸೊರಟೂರ, ಹಿರೇಕೆರೂರು ಹೋಬಳಿ ಘಟಕದ ಅಧ್ಯಕ್ಷ ಬಿ.ಎಸ್. ಪಾಟೀಲ, ಕಾರ್ಯದರ್ಶಿ ಕೆ.ಜಿ. ಮಡಿವಾಳರ, ಸಾಹಿತಿ ಸುರೇಶ ಕರಡೇರ, ಎನ್.ಎಸ್. ಹೆಗ್ಗೇರಿ, ಬಿ.ಟಿ. ಚಿಂದಿ, ರಾಮಣ್ಣ ತೆಂಬದ, ಬಸವರಾಜ ಪೂಜಾರ, ಈರಣ್ಣ ಚಿಟ್ಟೂರ, ಎನ್.ಎಸ್. ಚಿಕ್ಕನರಂಗುಂದಮಠ, ಶಿಕ್ಷಕರು, ಕಸಾಪ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net