ಪ್ರತಿಯೊಬ್ಬರೂ ಸಮಾಜಮುಖಿಯಾಗಿ ಬದುಕಲಿ

SGN DHARMA SABHE
Published on

ಶಿಗ್ಗಾಂವಿ: ಪ್ರತಿಯೊಬ್ಬ ವ್ಯಕ್ತಿಯು ಸತ್ಯ ಶುದ್ಧ ಹಾಗೂ ಪ್ರಾಮಾಣಿಕವಾಗಿ ದುಡಿದು ದಾಸೋಹ ಮಾಡುವ ಮೂಲಕ ಸಮಾಜಮುಖಿಯಾಗಿ ಬದುಕಬೇಕು ಎಂದು ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ನೂತನ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ದಾನ, ಧರ್ಮ, ದತ್ತಿಗಳನ್ನು ಮಾಡುವ ವಿಶಾಲ ಹೃದಯ ಹಾಗೂ ಹೃದಯ ವಾತ್ಸಲ್ಯತೆ ಅಳವಡಿಸಿಕೊಂಡು ತನು, ಮನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ಗುಳೇದಗುಡ್ಡ ಡಾ. ನೀಲಕಂಠ ಶಿವಾಚಾರ್ಯ ಅಮರೇಶ್ವರ ಬ್ರಹ್ಮನಠ ಶ್ರೀಗಳು, ಸೀತಾಗಿರಿ ಡಾ.ಎ.ಸಿ. ವಾಲಿ ಮಹಾರಾಜರು ಆಶೀರ್ವಚನ ನೀಡಿದರು.

ಪರಶುರಾಮ ಸೊನ್ನದ, ದೇವರಾಜ ಸುಣಗಾರ, ಮಲ್ಲೇಶಪ್ಪ ಅತ್ತಿಗೇರಿ, ಶಿದ್ರಾಮಪ್ಪ ಯಲಿಗಾರ, ಉಮೇಶ ಗೌಳಿ, ಮಂಜುನಾಥ ದುಭೆ, ರಾಮಣ್ಣ ಅಂದಲಗಿ, ಹೊನ್ನಪ್ಪ ಹಾಳಿ, ಗುಡ್ಡಪ್ಪ ಸುಣಗಾರ, ವೀರೇಂದ್ರ ಬಳಿಗಾರ, ರಾಜಣ್ಣ ಕೊಪ್ಪಳ, ಫಕೀರಪ್ಪ ಕಾಂಬಳೆ, ಸದಾಶಿವಯ್ಯ ಹಿರೇಮಠ, ವಿರೂಪಾಕ್ಷಪ್ಪ ನೀರಲಗಿ, ಸುಶೀಲ ಹಿರೇಮಠ, ಇತರರು ಉಪಸ್ಥಿತರಿದ್ದರು. ಸುಭಾಸ ಚವ್ಹಾಣ, ಪ್ರೊ. ಶಶಿಕಾಂತ ರಾಠೋಡ ಹಾಗೂ ಗಂಗೂಬಾಯಿ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net