

ಚಿಕ್ಕೋಡಿ: ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್, ತೆಂಗಿನ ಚಿಪ್ಪು, ಟೈರ್ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ಸುರಕ್ಷತೆ ವಹಿಸಿದಾಗ ಮಾತ್ರ ಡೆಂೆಯಿಂದ ದೂರ ಉಳಿಯಲು ಸಾಧ್ಯ ಎಂದು ರಾಜ್ಯ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಅರಬಾವಿ ಹೇಳಿದರು.
ತಾಲೂಕಿನ ಟಾಂಗ್ಯಾನಕೋಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಡೆಂೆ
ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜ್ವರ ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕೆಂದು ತಿಳಿಸಿದರು.
ಆರ್.ಟಿ.ಕಾಮನಗೋಳ, ಕೆ.ಡಿ. ಜಕ್ಕಪ್ಪಗೋಳ, ಸಂತೋಷ ತರಾಳೆ, ದೀಪಾ ಪೂಜೇರಿ, ಮಾಲು ಮಾಳಿ, ಲಕ್ಷ್ಮೀ ದಿನ್ನಿಮನಿ, ಎಂ.ಎಂ. ಮಾದರ, ರಾಜಶ್ರೀ ಮಾಳಿ ಇತರರಿದ್ದರು.