ಎಲ್ಲರಲ್ಲೂ ಮೂಡಲಿ ಸೈನ್ಯದ ಶಿಸ್ತು

My country my soil
Published on

ಕುಮಟಾ: ಸೈನ್ಯದ ಶಿಸ್ತು ಮನುಷ್ಯನಿಗೆ ಉತ್ತಮ ವ್ಯಕ್ತಿತ್ವ ನೀಡುತ್ತದೆ. ನಾಗರಿಕ ಸಮಾಜದಲ್ಲೂ ಇಂಥ ಗುಣಗಳು ಬೆಳೆದರೆ ದೇಶದ ಉನ್ನತಿಯಾಗುತ್ತದೆ ಎಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅನಂತ ಮಾಸೂರಕರ ಹೇಳಿದರು.

77 ನೇ ಸ್ವಾತಂತ್ರ್ಯೊತ್ಸವ ನಿಮಿತ್ತ ನನ್ನ ಮಣ್ಣು ನನ್ನ ದೇಶ ಅಭಿಯಾನದಡಿ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ಉದ್ಯಾನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ದೇಶಕ್ಕಾಗಿ ಬಲಿದಾನಗೈದ ಯೋಧರಿಗಾಗಿ ಶಿಲಾ ಸ್ಮಾರಕ ಸಮರ್ಪಣೆ, ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದರು.

ಸೈನ್ಯ ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕನೂ ದೇಶಸೇವೆಯ ಗುರಿಯೊಂದಿಗೆ ಕೆಲಸ ಮಾಡುವವರಾಗಬೇಕು. ರಾಜಕಾರಣಿಗಳ ಮಕ್ಕಳು ಕೂಡ ಮಿಲಿಟರಿ ಸೇರುವಂತಾಗಬೇಕು.

ನನಗೆ ಕಾಲೇಜು ದಿನಗಳಲ್ಲಿ ಪಡೆದ ಎನ್​ಸಿಸಿ ತರಬೇತಿಯ ಹಿನ್ನೆಲೆಯಿಂದಾಗಿ ಸೇನೆಗೆ ಸೇರುವ ಪ್ರೇರಣೆಯಾಯಿತು. 1971ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಧಿಕಾರಿಯಾಗಿ ಸೇನೆ ಮುನ್ನಡೆಸುವ ಅದ್ಭುತ ಅವಕಾಶ ಸಿಕ್ಕಿತ್ತು ಎಂದರು.

ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ದೇಶಕ್ಕಾಗಿ ತ್ಯಾಗ ಬಲಿದಾನದ ಸಂಕೇತವಾಗಿ ನಿರ್ವಿುಸಲಾದ ಶಿಲಾ ಸ್ಮಾರಕವನ್ನು ಸಮರ್ಪಣೆಗೊಳಿಸಿ ಮಾತನಾಡಿ, ಜನತೆ ಸಸಿ ನೆಟ್ಟು ಪರಿಸರ ಸಂರಕ್ಷಿಸುವ ಮೂಲಕ ಭವಿಷ್ಯದ ಭಾರತಕ್ಕೆ ಕೊಡುಗೆ ನೀಡಬೇಕು. ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೆ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು.

ಹೆತ್ತವರನ್ನು ಗೌರವಿಸುವುದರ ಜತೆಗೆ ಸಮಾಜದಲ್ಲಿ ಉತ್ತಮ ಹೆಸರು ಗಳಿಸಬೇಕು. ಪ್ರತಿ ಶಾಲಾ ಆವರಣ ಸೇರಿದಂತೆ ಪ್ರತಿ ಗ್ರಾಮದಲ್ಲಿ ಕನಿಷ್ಠ 75 ಗಿಡಗಳನ್ನಾದರೂ ನೆಟ್ಟು ಪೋಷಿಸುವಂತಾಗಬೇಕು ಎಂದರು.

ಅನಂತ ಮಾಸೂರಕರ ಚಿತ್ರಿಗಿ, ಮಾರುತಿ ನಾರಾಯಣ ನಾಯ್ಕ ಚಿತ್ರಿಗಿ, ಚಂದ್ರಕಾಂತ ಜಟ್ಟಿ ನಾಯ್ಕ ಚಿತ್ರಿಗಿ, ಗೋವಿಂದರಾಯ ವಾಸು ನಾಯ್ಕ, ಗಾಂಧಿನಗರ ಮಣಕಿ, ಗಣಪತಿ ರಾಮಚಂದ್ರ ಮಡಿವಾಳ ಊರಕೇರಿ, ದುರ್ಗಾನಂದ ಜಿ. ನಾಯ್ಕ ದೇವರಹಕ್ಕಲ, ಹರಿನಾಯ್ಕ, ದೇವರಹಕ್ಕಲ, ಶಿವರಾಮ ಗುನಗೇರಿ ನಾಯ್ಕ ಹೆರವಟ್ಟಾ, ಲೋಕೇಶ ಅರಿಶಿಣಗುಪ್ಪಿ, ಮಹೇಶ ಗಣೇಶ ಶೆಟ್ಟಿ ಚಿಕ್ಕೊಳ್ಳಿ, ದಯಾನಂದ ನಾಯ್ಕ, ರಾಜು ವಿ. ನಾಯ್ಕ, ಕೆ.ಎಲ್. ನಾಯ್ಕ ಹೆಗಡೆ, ಕೇಶವ ಪಟಗಾರ ಚಿತ್ರಿಗಿ, ಭರತ ವಿಠ್ಠಲ ನಾಯ್ಕ ಇನ್ನಿತರರನ್ನು ಸನ್ಮಾನಿಸಲಾಯಿತು.

ಪುರಸಭೆ ಸದಸ್ಯರಾದ ಕಿರಣ ಅಂಬಿಗ, ಎಂ.ಟಿ. ನಾಯ್ಕ, ವಿನಯಾ ಜಾರ್ಜ್, ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ವ್ಯವಸ್ಥಾಪಕಿ ಅನಿತಾ ಶೆಟ್ಟಿ, ಲೇಖಪಾಲ ಲೀಲಾ ರಾಯ್ಕರ, ಇಂಜಿನಿಯರ್ ಉಮೇಶ ಮಡಿವಾಳ, ಶ್ರೀಧರ ಗೌಡ, ರಾಮಾ ನಾಯ್ಕ, ಆರೋಗ್ಯ ನಿರೀಕ್ಷಕಿ ವೀಣಾ ಎಚ್., ಎಂಎಸ್. ನಾಯ್ಕ, ಮೀನಾಕ್ಷಿ ಆಚಾರಿ, ದಯಾನಂದ ದೇಸಾಯಿ, ನಾಗರಾಜ ಶೆಡಗೇರಿ, ಜಾಕೋಬ ಬಳ್ಳಾರಿ ಇತರರು ಇದ್ದರು. ಮಂಜುನಾಥ ನಾಯ್ಕ ಪಂಚ ಪ್ರಾಣ ಪ್ರತಿಜ್ಞಾ ವಿಧಿ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net