ಆರ್ಥಿಕ ಸಮಾನತೆ ಪಡೆಯಲು ಪ್ರತಿಯೊಬ್ಬರಿಗೂ ಅವಕಾಶ ದೊರೆಯಲಿ

25.npk 2.
ಕೊಟ್ಟಮುಡಿಯ ಮರ್ಕಜುಲ್ ಹಿದಾಯ ಎಜುಕೇಷನ್ ಸೆಂಟರ್‌ನಿಂದ 6 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಪ್ರಥಮ ದರ್ಜೆ ಕಾಲೇಜು ಹಾಗೂ ಹೆಣ್ಣು ಮಕ್ಕಳ ವಸತಿಗೃಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
Published on

ನಾಪೋಕ್ಲು: ಸಾಮಾಜಿಕ, ಆರ್ಥಿಕ ಸಮಾನತೆ ಸಿಗಬೇಕಾದರೆ ಪ್ರತಿಯೊಬ್ಬರಿಗೂ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ಇಲ್ಲಿಗೆ ಸಮೀಪದ ಕೊಟ್ಟಮುಡಿಯ ಮರ್ಕಜುಲ್ ಹಿದಾಯ ಎಜುಕೇಷನ್ ಸೆಂಟರ್ ವತಿಯಿಂದ 6 ಕೋಟಿ ರೂ. ವೆಚ್ಚದ ಪ್ರಥಮ ದರ್ಜೆ ಕಾಲೇಜು ಹಾಗೂ ಹೆಣ್ಣು ಮಕ್ಕಳ ವಸತಿಗೃಹದ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.


ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಣ ಯಾವುದೇ ಧರ್ಮ ,ಜಾತಿ, ಭಾಷೆಗೆ ಮೀಸಲಲ್ಲ. ನೂರಾರು ವರ್ಷಗಳ ಕಾಲ ಬಹುಸಂಖ್ಯಾತ ಜನರು ಶಿಕ್ಷಣದಿಂದ ವಂಚಿತರಾದರು. ಆದ್ದರಿಂದ ಸಮಾಜದಲ್ಲಿ ಅಸಮಾನತೆಯನ್ನು ಕಾಣುತ್ತಿದ್ದೇವೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಆಗಬೇಕಾದದ್ದು ಇಂದಿನ ಅವಶ್ಯಕತೆ ಎಂದು ತಿಳಿಸಿದರು.


ಗೃಹ ಸಚಿವ ಡಾ.ಜಿ.ಪರಮೇಶ್, ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಚಿವ ಬಿ.ನಾಗೇಂದ್ರ, ಡಾ.ಎಚ್. ಸಿ.ಮಹದೇವಪ್ಪ, ಕೆ. ವೆಂಕಟೇಶ್, ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ , ಡಾ.ಮಂತರ್ ಗೌಡ, ಉದ್ಯಮಿ ಇಮ್ರಾನ್ ಸಿದ್ದಿಕಿ, ಕಾಂಗ್ರೆಸ್ ಮುಖಂಡ ಸುಹೈಲ್ ಖಾದರ್, ಸಯ್ಯದ್ ಕಿಲ್ಲೂರ್ ತಂಗಳ್, ಆಸ್ರಫ್ ಅಪ್ಸನಿ, ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಶಾಫಿ, ಅಬ್ದುಲ್ ರಶೀದ್, ಜೈನಿ ಕಾಮಿಲ್ ಸಖಾಫಿ ಸುಂಟಿಕೊಪ್ಪ ಲತೀಫ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಕೊಟ್ಟಮುಡಿ, , ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಅಶೋಕ್ ಎಸ್.ಆಲೂರು, ಕುಲ ಸಚಿವ ಡಾ.ಸೀನಪ್ಪ, ಇಲ್ಯಾಸ್ ತಂಗಳ್, ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಮೊಯಿದು, ಹಮೀದ್ ಕಬಡಕೇರಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ , ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net