

ಹಾನಗಲ್ಲ : ಪರಿಸರ ರಕ್ಷಣೆ ಯಾರೊಬ್ಬರ ಹೊಣೆಯಲ್ಲ. ಸರ್ಕಾರವೇ ಎಲ್ಲವನ್ನೂ ಮಾಡಲಾಗುವುದಿಲ್ಲ. ನಮ್ಮ ಜವಾಬ್ದಾರಿ ಏನು ಎಂದು ಪ್ರಶ್ನಿಸಿಕೊಂಡು ಕಾರ್ಯಪ್ರವೃತ್ತರಾದರೆ ಮಾತ್ರ ಯಾವುದೇ ಘೋಷಣೆ, ಪ್ರಚಾರವಿಲ್ಲದೆ ಪರಿಸರದ ರಕ್ಷಣೆ ಸಾಧ್ಯ ಎಂದು ನಿವೃತ್ತ ಶಿಕ್ಷಣಾಧಿಕಾರಿ ಪಿ.ಎಂ. ಪಾಟೀಲ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಕುಮಾರೇಶ್ವರನಗರ ಬಡಾವಣೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಶಕ್ತಿ, ಸಾಮರ್ಥ್ಯಕ್ಕೆ ಅನುಗುಣವಾಗಿ ಗಿಡಗಳನ್ನು ಬೆಳೆಸುವ, ಅವುಗಳನ್ನು ರಕ್ಷಿಸುವ ಕಾರ್ಯದಲ್ಲಿ ಎಲ್ಲರೂ ಒಟ್ಟಾಗಿ ಆಲೋಚಿಸಿ ಯೋಜಿಸಿ ಕಾರ್ಯಪ್ರವೃತ್ತರಾಗಬೇಕು. ಅರಣ್ಯ ಉಳಿದರೆ ಮಾತ್ರ ಮನುಷ್ಯ ಉಳಿಯುತ್ತಾನೆ ಂದರು.
ವಕೀಲ ರವಿಬಾಬು ಪೂಜಾರ ಮಾತನಾಡಿ, ಪ್ರತಿ ಮನೆಗೊಂದು ಮರ, ಊರಿಗೊಂದು ವನ ಎಂಬ ಘೋಷ ವಾಕ್ಯವನ್ನು ಪಾಲಿಸಲು ಸಾಧ್ಯವಾದರೆ ನಮ್ಮ ಪರಿಸರ ನಮ್ಮ ಬದುಕು ಸರಿಯಾಗಿ ಉಳಿಯಲು ಸಾಧ್ಯ ಎಂದರು.
ಮಾರುತಿ ಶಿಡ್ಲಾಪೂರ, ಎಂ. ಪ್ರಸನ್ನಕುಮಾರ, ಪ್ರೊ. ಸಿ. ಮಂಜುನಾಥ, ಎನ್.ಎಂ. ಪೂಜಾರ, ವಕೀಲ ಎಂ.ಎಸ್. ಹುಲ್ಲೂರ, ಎಂ.ಎಸ್. ಅಮರದ, ಅಣ್ಣಪ್ಪ ನಾಯಕ, ವೀರಣ್ಣ ಮಡಿವಾಳರ, ನಿವೃತ್ತ ಸೈನಿಕ ಶಂಭಣ್ಣ ಇಂಗಳಿಕಿ, ಸುಭಾಸ ಹೊಸಮನಿ, ಎಚ್. ಸುಧಾ, ಅಶೋಕ ದಾಸರ, ಅನುರಾಧಾ ಬಣಕಾರ, ಪ್ರವೀಣ ತಾಳಗುಂದ, ಕುಮಾರ ಹತ್ತಿಕಾಳ, ರವಿರಾಜ ಕಲಾಲ, ರವಿ ತಿರುಮಲೆ ಇತರರಿದ್ದರು.