ಪ್ರತಿಯೊಬ್ಬರೂ ಓದುವುದರತ್ತ ಗಮನ ನೀಡಲಿ

Vasanta Sambhrama
Published on

ಸಿದ್ದಾಪುರ: ಓದುವುದನ್ನು ಕಳೆದುಕೊಳ್ಳುತ್ತಿದ್ದೇವೆ. ಮಕ್ಕಳು-ಮೊಮ್ಮಕ್ಕಳು ಓದುವುದರ ಬಗ್ಗೆ ಗಮನ ನೀಡುತ್ತಿಲ್ಲ. ಎಲ್ಲರೂ ಓದುವುದನ್ನು ಹಾಗೂ ಓದಿನ ಅನುಭವ ಪ್ರತಿಯೊಬ್ಬರೂ ಹೆಚ್ಚಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಹೇಳಿದರು.

ತಾಲೂಕಿನ ತ್ಯಾಗಲಿ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಭವನದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಸಂಸ್ಥೆ, ತ್ಯಾಗಲಿ ಸೇವಾ ಸಹಕಾರಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶನಿವಾರ ಆಯೋಜಿಸಿದ್ದ ವಸಂತ ಸಂಭ್ರಮ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬ್ರಾಯ ಮತ್ತೀಹಳ್ಳಿ, ತವರಿನ ಸನ್ಮಾನ ಖುಷಿಯಾಗಿದೆ. ಜವಾಬ್ದಾರಿ ಹೆಚ್ಚಿದೆ ಎಂದರು.

ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಬಿ. ಹೆಗಡೆ ಮತ್ತೀಹಳ್ಳಿ, ನಿರ್ದೇಶಕ ಎಂ.ಆರ್. ಹೆಗಡೆ ಬಾಳೇಜಡ್ಡಿ ಮಾತನಾಡಿದರು.

ಗಾನ, ನೃತ್ಯ ಸಂಭ್ರಮ

ರಮೇಶ ಹಳೆಕಾನಗೋಡ ಅವರ ಕಲ್ಪನೆಯ ವಿಶಿಷ್ಟ ಕಾರ್ಯಕ್ರಮವನ್ನು ಸ್ವರ್ಣವಲ್ಲೀ ಮಾತೃ ವೃಂದ ಹಾಗೂ ಯಕ್ಷಗಾನದ ಕಲಾವಿದರು ನಡೆಸಿಕೊಟ್ಟರು. ಭಜನಾ ತಂಡದ ಕಲಾವಿದರಾದ ಸಂಧ್ಯಾ ಹೆಗಡೆ, ಶ್ರತಿ ವೈದ್ಯ, ಗೀತಾ ಹೆಗಡೆ , ವಿಶಾಲಾಕ್ಷಿ ಭಟ್ಟ, ನಾಗರತ್ನಾ ಭಟ್ಟ, ವಾಣಿ ಭಟ್ಟ, ಚಂದ್ರಕಲಾ ಭಟ್ಟ, ಚೇತನಾ ಹೆಗಡೆ, ಸುಮನಾ ಭಟ್ಟ ಹಾಡಿದರು.

ಹಾಮೋನಿಯಂದಲ್ಲಿ ರಾಧಾ ಭಟ್ಟ, ತಬಲಾದಲ್ಲಿ ಕಿರಣ ಕಾನಗೋಡು ಸಹಕರಿಸಿದರು. ಗೀತಾ ಹೆಗಡೆ ಶೀಗೇಮನೆ ಸಂಯೋಜಿಸಿದ್ದರು. ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್, ವಿಘ್ನೕಶ್ವರ ಗೌಡ ಯಕ್ಷಗಾನ ಶೈಲಿಯಲ್ಲಿ ಪ್ರಸ್ತುತಗೊಳಿಸಿದರು.

ಕು. ತುಳಸಿ ಹೆಗಡೆ ಅವರಿಂದ ಎಂ.ಎ.ಹೆಗಡೆ ಸಾಹಿತ್ಯ, ನಿರ್ದೇಶನದ ಶ್ರೀಕೃಷ್ಣಂ ವಂದೇ ಯಕ್ಷ ರೂಪಕ ಕೃಷ್ಣನ ಬಾಲ ಲೀಲೆಗಳು ಅನಾವರಣಗೊಂಡಿತು. ಕು.ನಂದನ ಮಹೇಶ ಭಟ್ಟ ಪ್ರಾರ್ಥಿಸಿದರು. ವಿಶ್ವಶಾಂತಿ ಟ್ರಸ್ಟ್ ಉಪಾಧ್ಯಕ್ಷ ರಮೇಶ ಹಳೆಕಾನಗೋಡ ಸ್ವಾಗತಿಸಿದರು. ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ಸನ್ಮಾನ ಪತ್ರ ವಾಚಿಸಿದರು. ಆರ್.ಎಸ್. ಹೆಗಡೆ ವಂದಿಸಿದರು. ವಿ.ಎಂ. ಹೆಗಡೆ ಶಿಂಗು, ರೇಖಾ ವಸಂತ ಹೆಗಡೆ ತ್ಯಾಗಲಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net