ಪ್ರತಿಯೊಬ್ಬರು ಕಲಾವಿದರನ್ನು ಪ್ರೋತ್ಸಾಹಿಸಲಿ

HB
ಅಳವಂಡಿಯ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ತೊಗಲು ಗೊಂಬೆಯಾಟದ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಕಲಾವಿದ ಕೇಶಪ್ಪ ಶೀಳ್ಳಿಕ್ಯಾತರ, ಪಾಂಡು ಹಾಗೂ ಶ್ರೀನಿವಾಸ ಇಮ್ಮಡಿ, ಬಾಳಪ್ಪ, ಪ್ರಶಾಂತ, ಮಹಾಂತೇಶ, ಮೇಘರಾಜ, ಮೌನೇಶ, ವೀರೇಶ ಇತರರಿದ್ದರು.
Published on

ಅಳವಂಡಿ: ಯುವಕರು ಮೊಬೈಲ್‌ನಲ್ಲಿ ಕಾಲಹರಣ ಮಾಡದೇ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಮಾರುತೇಶ್ವರ ಭಜನಾ ಸಂಘದ ಅಧ್ಯಕ್ಷ ಶ್ರೀನಿವಾಸ ಇಮ್ಮಡಿ ಹೇಳಿದರು.


ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಶಮಿವೃಕ್ಷ ಸಾಮಾಜಿಕ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿರಾಟ ಪರ್ವ ತೊಗಲು ಗೊಂಬೆಯಾಟದ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಟಕ, ಗೀಗೀಪದ, ತೊಗಲು ಗೊಂಬೆಯಾಟ, ಬಯಲಾಟ, ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಆಯೋಜಿಸಲಾಗುತ್ತಿದೆ. ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬರು ಕರ್ತವ್ಯವಾಗಿದೆ ಎಂದರು.


ಪ್ರಮುಖರಾದ ಬಾಳಪ್ಪ ವಾಲಿಕಾರ, ಪ್ರಶಾಂತ ಆರೇರ್, ಮಹಾಂತೇಶ ಹಳ್ಳಿಗುಡಿ, ವೀರೇಶ ಹಂಚಿನಾಳ, ಮೇಘರಾಜ ವಾಲಿಕಾರ, ಮೌನೇಶ ಕಮ್ಮಾರ, ಸಂತೋಷ ಕರಡಿ, ಗಣೇಶ ಹಡಪದ, ಮಹೇಶ ಬಳಿಗಾರ, ಅನ್ವರ ನದಾಪ್, ಶರಣಪ್ಪ ಪೂಜಾರ, ಮಾರುತಿ, ಪ್ರಶಾಂತ ಸುಣಗಾರ, ಕೋಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net