ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಳ್ಳಲಿ

Let everyone develop a spirit of service
ಯೋಗ ಕುಟುಂಬದ ವತಿಯಿಂದ ಇಳಕಲ್ಲ ಕೋ ಆಪ್‌ರೆಟಿವ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಸಿಎಂ ಸಜ್ಜನ್ ಅವರಿಗೆ ಗಣ್ಯರು ಸನ್ಮಾನಿಸಿದರು. ರವಿಶಂಕರಸಾ ಲ. ಬಸವಾ, ರವಿ ರಾಯಬಾಗಿ ಇತರರಿದ್ದರು.
Published on

ಇಳಕಲ್ಲ: ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಇಳಕಲ್ಲದ ಗುರುಮಹಾಂತ ಸ್ವಾಮೀಜಿ ಹೇಳಿದರು.

ನಗರದ ಬಸವಾ ಪ್ಯಾಲೇಸ್‌ನಲ್ಲಿ ಸ್ಥಳೀಯ ಹಣಕಾಸು ಸಂಸ್ಥೆ ಇಳಕಲ್ಲ ಕೋ- ಆಪರೇಟಿವ್ ಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಎಂ. ಸಜ್ಜನ ಅವರಿಗೆ ಯೋಗ ಕುಟುಂಬದಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೇವೆ ಮಾಡುವ ಗುಣ ಯಾರಲ್ಲಿರುತ್ತದೆಯೋ ಅವರೆಲ್ಲರೂ ದೊಡ್ಡ ಮನುಷ್ಯರಾಗುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಖ್ಯಾತ ಯೋಗಪಟು ಸಂಗಮೇಶ ಬಂಡರಗಲ್, ಲಿಂಗಸೂರು ಮತಕ್ಷೇತ್ರದ ಮಾಜಿ ಶಾಸಕ ಯೋಗ ಕುಟುಂಬದ ಸದಸ್ಯ ಡಿ.ಎಸ್. ಹುಲಗೇರಿ, ಕಾಂಗ್ರೆಸ್ ಹಿರಿಯ ಮುಖಂಡ ವೆಂಕಟೇಶ ಸಾಕಾ ಮಾತನಾಡಿದರು.

ಯೋಗ ಕುಟುಂಬದ ಹಿರಿಯ ಸದಸ್ಯರಾದ ಶಾಂತಕುಮಾರ ಸುರಪುರ, ಬಸವ ಪ್ಯಾಲೇಸ್ ಮಾಲೀಕ ರವಿಶಂಕರಸಾ ಲ. ಬಸವಾ, ಯೋಗ ಕುಟುಂಬದ ಕಾರ್ಯದರ್ಶಿ ರವಿ ರಾಯಬಾಗಿ ಹಾಗೂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net