ಪ್ರತಿಯೊಬ್ಬರೂ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲಿ

22ATHANIGRAMIN1
Published on

ಅಥಣಿ ಗ್ರಾಮೀಣ: ಕ್ರೀಡಾಕೂಟಗಳ ಮಹತ್ವ ಅರಿತು ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಗ್ರಾಪಂ ಉಪಾಧ್ಯಕ್ಷ ಅರ್ಜುನ ಪೂಜಾರಿ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಶಾಸಕ ಲಕ್ಷ್ಮಣ ಸವದಿ ಅಭಿಮಾನಿ ಬಳಗ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರಿಕೆಟ್ ವೇದಿಕೆ ಸದ್ಬಳಕೆ ಮಾಡಿಕೊಂಡು ಕ್ರೀಡೆಯಲ್ಲಿ ಭಾಗವಹಿಸಿ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಬೇಕು. ಕೆಲ ಯುವಜನರು ಐಪಿಎಲ್ ಪಂದ್ಯಾವಳಿ ಬೆಟ್ಟಿಂಗ್ ಬೆನ್ನತ್ತಿ ಮನೆ, ಮಠ, ಕಳೆದುಕೊಂಡ ಆತ್ಮಹತ್ಯೆ ಹಂತ ತಲುಪುತ್ತಿರುವುದು ಬೇಸರದ ಸಂಗತಿ ಎಂದರು.

ವೇದಮೂರ್ತಿ ಮಹೇಶ ವಿರಕ್ತಮಠ ಮಾತನಾಡಿ, ಯುವಜನರು ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸದೃಢರಾಗಬೇಕು. ಶಾಸಕ ಲಕ್ಷ್ಮಣ ಸವದಿ ಅಭಿಮಾನಿ ಬಳಗ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಕ್ರೀಡಾಪಟುಗಳನ್ನು ಒಂದುಗೂಡಿಸಿರುವುದು ಸಂತಸದ ವಿಷಯ ಎಂದರು.

ಹದಿನೈದು ದಿನ ನಡೆಯುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟçದ ೩೫ ತಂಡ ಭಾಗವಹಿಸಿವೆ. ಮುಖಂಡರಾದ ಮಾನಸಿಂಗ ಮಗರ, ಮಲ್ಲಿಕಾರ್ಜುನ ಪರಾಂಡೆ, ಅನಿಲ ಮುಳಿಕ, ಅಪ್ಪು ನಾಯಿಕ, ಬಂಡು ಜಾಧವ, ಸತೀಶ ದೊಡಮನಿ, ಸುರೇಶ ಗುಳಪ್ಪನವರ, ಮಹಾದೇವ ಚವ್ಹಾಣ, ಸುರೇಶ ವೀರಗೌಡ, ಹಿರಚಂದ ಹಳಕಿ, ಮಹಾವೀರ ವೀರಗೌಡ, ರಾಮಗೌಡ ರೊಡ್ಡ, ನಾನಾಸಾಬ ವೀರಗೌಡ, ಪರಶುರಾಮ ತಳಕೇರಿ, ಶಂಕರ ಚವ್ಹಾಣ, ಕಿರಣ ಪಾಟಣಕರ, ಪ್ರದೀಪ ನಾಯಿಕ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net